ಕೊಡಗು ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಕುಂಭದ್ರೋಣ ಮಳೆಯಾದ ಪರಿಣಾಮ ತಮಿಳುನಾಡಿಗೆ 310 ಟಿಎಂಸಿ ಅಡಿಗೂ ಹೆಚ್ಚು ನೀರು ಈಗಾಗಲೇ ಹರಿದುಹೋಗಿದೆ

 

ಬೆಂಗಳೂರು, ಆ.27- ಕೊಡಗು ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಕುಂಭದ್ರೋಣ ಮಳೆಯಾದ ಪರಿಣಾಮ ತಮಿಳುನಾಡಿಗೆ 310 ಟಿಎಂಸಿ ಅಡಿಗೂ ಹೆಚ್ಚು ನೀರು ಈಗಾಗಲೇ ಹರಿದುಹೋಗಿದೆ.
ಕಾವೇರಿ ಜಲಾನಯನ ಪ್ರದೇಶದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿದ ಮಳೆಯ ಪರಿಣಾಮ ಕೆಆರ್‍ಎಸ್ ಜಲಾಶಯವೊಂದರಿಂದಲೇ ಸುಮಾರು 150 ಟಿಎಂಸಿ ಅಡಿಯಷ್ಟು ನೀರನ್ನು ತಮಿಳುನಾಡಿಗೆ ಬಿಡಲಾಗಿದೆ. ರಾಜ್ಯದಿಂದ ತುಳುನಾಡಿಗೆ ಬಿಡಬೇಕಿದ್ದ ನೀರಿನ ಪ್ರಮಾಣಕ್ಕಿಂತಲೂ ಎರಡು ಪಟ್ಟು ಹೆಚ್ಚು ನೀರು ಹರಿದು ಹೋಗಿದೆ.
ಜೂನ್‍ನಿಂದ ಆಗಸ್ಟ್ ಅಂತ್ಯದವರೆಗೆ ಸುಮಾರು 84 ಟಿಎಂಸಿ ಅಡಿಯಷ್ಟು ನೀರನ್ನು ಬಿಡಬೇಕಾಗಿತ್ತು. ಈಗಾಗಲೇ ಅದರ ಮೂರು ಪಟ್ಟುಗಳಿಗೂ ಅಧಿಕ ನೀರು ತಮಿಳುನಾಡಿಗೆ ಬಿಡಲಾಗಿದೆ.
ಕಾವೇರಿಕೊಳ್ಳದ ಎಲ್ಲಾ ಪ್ರಮುಖ ಜಲಾಶಯಗಳೂ ಭರ್ತಿಯಾಗಿರುವುದರಿಂದ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡಬೇಕಾುತು. ರಾಜ್ಯದಿಂದ ತುಮಿಳುನಾಡಿಗೆ ಜೂನ್‍ನಲ್ಲಿ 9.23 ಟಿಎಂಸಿ ಅಡಿ, ಜುಲೈನಲ್ಲಿ 31.93 ಟಿಎಂಸಿ, ಆಗಸ್ಟ್‍ನಲ್ಲಿ 46.16 ಟಿಎಂಸಿ ಅಡಿಯಷ್ಟು ನೀರು ಬಿಡುವಂತೆ ಸುಪ್ರೀಂಕೋರ್ಟ್ ಹಂಚಿಕೆ ಮಾಡಿತ್ತು.
ಅಕ್ಟೋಬರ್ ಅಂತ್ಯದವರೆಗೆ 144 ಟಿಎಂಸಿ, ನವೆಂಬರ್ ಅಂತ್ಯದವರೆಗೆ 152 ಟಿಎಂಸಿ ಅಡಿ ನೀರು ಬಿಡಬೇಕಾಗಿದೆ. ಈಗಾಗಲೇ ಅದರ ದುಪ್ಪಟ್ಟು ನೀರು ಬಿಡಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕಾವೇರಿ ನ್ಯಾಯಾಧಿಕರಣದ ಅಂತಿಮ ತೀರ್ಪಿನಲ್ಲಿ 192 ಟಿಎಂಸಿ ಅಡಿ ಬಿಡಬೇಕಾಗಿತ್ತು. ಇದರಲ್ಲಿ 14.5 ಟಿಎಂಸಿ ಅಡಿಯಷ್ಟು ಸುಪ್ರೀಂಕೋರ್ಟ್ ಕಡಿಮೆ ಮಾಡಿದ್ದರಿಂದ ರ್ವಾಕ 177.5 ಟಿಎಂಸಿ ಅಡಿ ಬಿಡಬೇಕಾಗಿದೆ. ಆದರೆ ವರ್ಷಡೀ ಬಿಡಬೇಕಾಗಿದ್ದ ನೀರಿಗಿಂತ ಹೆಚ್ಚು ನೀರು ಹರಿದುಹೋಗಿರುವುದು ಈ ಬಾರಿಯ ಶೇಷ.
ಇದರಿಂದ ತುಮಿಳುನಾಡು ಮತ್ತು ರಾಜ್ಯ ಸರ್ಕಾರದ ನಡುನ ನೀರು ಹಂಚಿಕೆ ವಾದಕ್ಕೆ ಈ ವರ್ಷ ತೆರೆ ಬಿದ್ದಂತಾಗಿದೆ. ಆದರೆ ಹೆಚ್ಚುವರಿ ನೀರು ಸಂಗ್ರಹ ಮತ್ತು ಸದ್ಬಳಕೆಗೆ ಜಲಾಶಯ ನರ್ಿುಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.
ಕಾವೇರಿಗೆ ಮೇಕೆದಾಟು ಬಳಿ ಮತ್ತೊಂದು ಜಲಾಶಯ ನರ್ಿುಸಿ ಹೆಚ್ಚುವರಿ ನೀರನ್ನು ಸಂಗ್ರಹಿಸಿ, ಸದ್ಬಳಕೆ ಮಾಡಿಕೊಂಡರೆ ಮಳೆ ಕೊರತೆಯಾದ ಸಂದರ್ಭದಲ್ಲಿಯೂ ಸಮಸ್ಯೆ ಹೆಚ್ಚಾಗದಂತೆ ತಡೆಯಬಹುದು ಎಂಬ ಅಭಿಪ್ರಾಯವಿದೆ.
ಮೇಕೆದಾಟು ಬಳಿ ರಾಜ್ಯ ಸರ್ಕಾರ ನರ್ಿುಸಲು ಉದ್ದೇಶಿಸಿರುವ ಯೋಜನೆ ಕಾರ್ಯಗತವಾಗದೆ ನನೆಗುದಿದೆ ಬಿದ್ದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ