ನಾಟಿಂಗ್ಹ್ಯಾಮ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಇನ್ನೂ ನಾಯಕತ್ವ ಪಕ್ವವಾಗಿಲ್ಲ ಎಂದೆಲ್ಲ ಟೀಕಿಸಿದ್ದ ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ರಿಂದಲೇ ಕೊಹ್ಲಿ ಭೇಷ್ ಎನಿಸಿಕೊಂಡಿದ್ದಾರೆ.
ಎಡ್ಜ್ಬಾಸ್ಟನ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲಿಗೆ ವಿರಾಟ್ ಕೊಹ್ಲಿಯೇ ಕಾರಣ. ಈ ಪಂದ್ಯದಲ್ಲಿ ಆರ್ ಅಶ್ವಿನ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದು ಅವರನ್ನು ಒಂದು ಗಂಟೆಗಳ ಕಾಲ ಮೈದಾನದಿಂದ ದೂರ ಇಟ್ಟಿದೆ ಈ ಪಂದ್ಯ ಸೋಲಿಗೆ ಕಾರಣ ಎಂದು ಹೇಳಿದ್ದರು.
ತಮ್ಮನ್ನು ಟೀಕಿಸಿದ್ದ ನಾಸಿರ್ ಹುಸೈನ್ ಅವರಿಗೆ ಕೊಹ್ಲಿ ಬಾಯಿ ಮಾತಿನಿಂದ ಉತ್ತರ ಕೊಡಲು ಹೋಗದೆ ತಮ್ಮ ಅದ್ಭುತ ಬ್ಯಾಟಿಂಗ್ ನಿಂದ ತಕ್ಕ ಉತ್ತರ ನೀಡಿದ್ದಾರೆ. ಇದೀಗ ನಾಸಿರ್ ಕೊಹ್ಲಿಯನ್ನು ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಎಂದು ಕರೆದಿದ್ದಾರೆ.
ಇದೀಗ ಮೂರನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಭರ್ಜರಿ ಬ್ಯಾಟಿಂಗ್ ಹಾಗೂ ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿರುವ ವಿರಾಟ್ ಕೊಹ್ಲಿಯನ್ನು ಟೀಕಿಸಲು ಯಾವುದೇ ಕಾರಣಗಳು ಸಿಗದಂತೆ ಆಗಿದೆ. ಒಟ್ಟಿನಲ್ಲಿ ಟೀಂ ಇಂಡಿಯಾ ಆಟಗಾರರು ತಮ್ಮ ವಿರುದ್ಧದ ಟೀಕೆಗಳಿಗೆ ಬಾಯಿಯಿಂದ ಉತ್ತರ ಕೊಡುವ ಬದಲು ತಮ್ಮ ಅದ್ಭುತ ಆಟದಿಂದ ಉತ್ತರ ಕೊಡುತ್ತಿದ್ದಾರೆ.