ಅಜಾತಶತ್ರು ನಿಧನಕ್ಕೆ ಗಣ್ಯಾತಿಗಣ್ಯರ ಸಂತಾಪ

ನವದೆಹಲಿ:ಆ-16: ನಿಜವಾದ ಭಾರತೀಯ ರಾಜಕಾರಣಿಯಾಗಿದ್ದ ವಾಜಪೇಯಿ ಇನ್ನಿಲ್ಲ ಎನ್ನುವುದನ್ನು ಕೇಳಲು “ಅತ್ಯಂತ ದುಃಖ”ವಾಗುತ್ತಿದೆ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್ ಹೇಳಿದ್ದಾರೆ.

ಬಡವರು ತಮ್ಮ ಧ್ವನಿಯನ್ನು ಕಳೆದುಕೊಂಡಿದ್ದಾರೆ ಎಂದು ಅಮಿತ್ ಷಾ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಪ್ರತಿಕ್ರಿಯಿಸಿ, ವಾಜಪೇಯಿ ನಿಧನದ ಸುದ್ದಿ ತೀವ್ರ ದುಃಖವನ್ನುಂಟು ಮಾಡಿದೆ. ಅವರ ನಿಧನದಿಂದಾಗಿ ಒಂದು ಯುಗವೇ ಅಂತ್ಯವಾಗಿದ್ದು, ಅವರೊಬ್ಬ ಶ್ರೇಷ್ಠ ಮುತ್ಸದ್ಧಿಯಾಗಿದ್ದರು ಎಂದು ಟ್ವೀಟ್‌ ಮಾಡಿದ್ದಾರೆ.

ನನ್ನ ನೋವುಗಳನ್ನು ವ್ಯಕ್ತಪಡಿಸಲು ಪದಗಳೇ ಇಲ್ಲ. ತುಂಬಾ ದುಃಖವಾಗಿದೆ ಎಂದು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾಣಿ ಅವರು ಸಂತಾಪ ಸೂಚಿಸಿದ್ದಾರೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು ವಾಜಪೇಯಿ ಓರ್ವ ಜಂಟಲ್ ಮನ್, ಅವರ ಅಗಲಿಕೆ ನೋವು ತಂದಿದೆ ಎಂದು ಹೇಳಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದು ಭಾರತ ಇಂದು ಓರ್ವ ಶ್ರೇಷ್ಠ ಮಗನನ್ನು ಕಳೆದುಕೊಂಡಿದೆ. ವಾಜಪೇಯಿ ಅವರು ಲಕ್ಷಾಂತರ ಜನರಿಂದ ಪ್ರೀತಿ, ಗೌರವ ಗಳಿಸಿದ್ದರು ಎಂದು ಹೇಳಿದ್ದಾರೆ.

ಇನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.

ಈ ವಿಡಿಯೋಗಳು ನಾವು ತಯಾರಿಸಿದ್ದಲ್ಲ. ವಾಟ್ಸಪ್ಪ್ ನಲ್ಲಿ ವೈರಲ್ ಆಗಿರೋ ವಿಡಿಯೋಗಳು. ನಾವು ಅವುಗಳನ್ನು ಪರಿಶೀಲಿಸಿ ನಿಮ್ಮೊಂದಿಗೆ ಕೇವಲ ಮನೋರಂಜನೆಗಾಗಿ ತೋರಿಸುತ್ತಿದ್ದೇವೆ. ನಾವು ಈ ವಿಡಿಯೋಗಳ ಮಾಲೀಕತ್ವದ ಹಕ್ಕು ಪಡೆಯುವುದಿಲ್ಲ. ಯಾರನ್ನು ನೋವುಂಟು ಮಾಡುವ ಅಥವಾ ತೇಜೋವಧೆ ಮಾಡುವ ಉದ್ದೇಶವು ನಮಗಿಲ್ಲ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ