ಮುಂಬೈ: ಭಾರತದ ಅತಿ ದೊಡ್ಡ ಬ್ಯಾಂಕ್ ಗಳಲ್ಲಿ ಒಂದಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ಶುಕ್ರವಾರ ತನ್ನ ಮೊದಲ ತ್ರೈಮಾಸಿಕ ವರದಿ ಬಿಡುಗಡೆ ಮಾಡಿದ್ದು ನಿರೀಕ್ಷೆ ಮೀರಿ ನಷ್ಟವಾಗಿರುವುದಾಗಿ ಹೇಳಿಕೊಂಡಿದೆ. ಈ ಸಾಲಿನಲ್ಲಿ ಬ್ಯಾಂಕ್ ಗೆ 4876 ಕೋಟಿ ರು. ನಷ್ಟ ಅನುಭವಿಸಿದೆ.
ಜೂನ್ 30 ರ ವರೆಗಿನ ಮೂರು ತಿಂಗಳ ಅವಧಿಯಲ್ಲಿ ಬ್ಯಾಂಕ್ ಈ ಪ್ರಮಾಣದ ನಷ್ಟ ಅನುಭವಿಸಿದೆ. ಇದೇ ವೇಳೆ ಕಳೆದ ಆರ್ಥಿಕ ವರ್ಷದ ಈ ಸಮಯದಲ್ಲಿ ಬ್ಯಾಂಕ್ 2006 ಕೋಟಿ ರೂ. ಲಾಭ ಗಳಿಸಿತ್ತು.ಆದರೆ ಕಳೆದ ಆರ್ಥಿಕ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಬ್ಯಾಂಕ್ 7718 ಕೋಟಿ ರೂ. ನಷ್ಟ ಅನುಭವಿಸಿತ್ತು.
ವಸೂಲಾಗದ ಸಾಲ ಹಾಗೂ ಭವಿಷ್ಯದ ನಷ್ಟವನ್ನು ಸರಿದೂಗಿಸಲು ಮುಂಗಡವಾಗಿ ತೆಗೆದಿರಿಸಿದ ಹಣದ ಕಾರಣಗಳಿಂದ ಈ ಪ್ರಮಾಣದ ನಷ್ಟವಾಗಿದೆ ಎಂದು ಬ್ಯಾಂಕ್ ಹೇಳಿಕೆಯಲ್ಲಿ ತಿಳಿಸಿದೆ.
ವಸೂಲಾಗದ ಸಾಲದ ಮೊತ್ತವು 188 ಕೋಟಿಯಿಂದ 213 ಕೋಟಿ ರು.ಗೆ ಏರಿಕಾತ್ಯಾಗಿದ್ದರೆ ಇದರ ನಿವ್ವಳಾಂಶವು 107 ಕೋಟಿಯಿಂದ 99.26 ಕೋಟಿ ರು.ಗೆ ಇಳಿಕೆ ಆಗಿದೆ.
ಭವಿಷ್ಯದಲ್ಲಿ ಎದುರಿಸಬೇಕಾದ ತೊಂದರೆಗಳಿಂದ ಪಾರಾಗಲು ಬ್ಯಾಂಕ್ 19238 ಕೋಟಿ ರು. ತೆಗೆದಿರಿಸಿದೆ ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.