
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳಿಂದ ವಿರೋಚಿತ ಸೋಲು ಅನುಭವಿಸಿದೆ.
ಇನ್ನು ಟೀಂ ಇಂಡಿಯಾದ ಖ್ಯಾತ ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನ ತಂಡ ಪಂದ್ಯ ಸೋಲಲು ಪ್ರಮುಖ ಕಾರಣವಾಗಿದೆ. ಮುರಳಿ ವಿಜಯ್, ಶಿಖರ್ ಧವನ್, ಕೆಎಲ್ ರಾಹುಲ್, ಅಜಿಂಕ್ಯ ರಹಾನೆ, ದಿನೇಶ್ ಕಾರ್ತಿಕ್ ಸೇರಿದಂತೆ ಸ್ಟಾರ್ ಬ್ಯಾಟ್ಸ್ ಮನ್ ಗಳಿದ್ದರು ಅವರಿಂದ ಹೇಳಿಕೊಳ್ಳುವಂತಾ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ.
ಒಟ್ಟಾರೆ ಎರಡೂ ಇನ್ನಿಂಗ್ಸ್ ನಲ್ಲೂ ವಿರಾಟ್ ಕೊಹ್ಲಿ 200 ರನ್ ಬಾರಿಸಿದ್ದರೆ ಉಳಿದ ಒಂಬತ್ತು ಆಟಗಾರರು ಪೇರಿಸಿದ್ದು ಒಟ್ಟಾರೆ 216 ರನ್ ಆಗಿದೆ.
ಇನ್ನು ಪಂದ್ಯದಲ್ಲಿ ಆಟಗಾರನೊಬ್ಬ ಎರಡೂ ಇನ್ನಿಂಗ್ಸ್ ಗಳಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿ, ಉಳಿದವರು ಒಮ್ಮೆಯೂ 49 ರನ್ ಗಳನ್ನೂ ಗಳಿಸದೆ ಇರುವಂತಹ ಸನ್ನಿವೇಶ್ ಭಾರತ ಟೆಸ್ಟ್ ತಂಡದ ಮಟ್ಟಿಗೆ ಇದು 6ನೇ ಬಾರಿ.