ಮೀಸಲಾತಿ, ಉದ್ಯೋಗ ಕುರಿತ ಗಡ್ಕರಿ ಹೇಳಿಕೆಗೆ ರಾಹುಲ್ ಪ್ರತಿಕ್ರಿಯೆ

ನವದೆಹಲಿ:ಆ-6: ಉದ್ಯೋಗಾವಕಾಶವೇ ಇಲ್ಲದಿರುವಾಗ ಮೀಸಲಾತಿಯೂ ಉದ್ಯೋಗ ಭದ್ರತೆಯನ್ನು ಒದಗಿಸಲಾರದು ಎಂಬ ಕೇಂದ್ರ ಸಚಿವ ನಿತೀನ್ ಗಡ್ಕರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಧ್ಯಕ್ಶ ರಾಹುಲ್ ಗಾಂಧಿ, ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆಯನ್ನು ಕೇಳುತ್ತಿದ್ದಾರೆ ಎಂದು ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಮರಾಠಾ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿಮಾತನಾಡಿದ ಗಡ್ಕರಿ, ಉದ್ಯೋಗಾವಕಾಶಗಳು ಇಲ್ಲದಿರುವಾಗ ಮೀಸಲಾತಿಯು ಉದ್ಯೋಗ ಭದ್ರತೆಯನ್ನು ಒದಗಿಸುವುದಿಲ್ಲ’ ‘ಮೀಸಲಾತಿ ನೀಡಲಾಗಿದೆ ಎಂದು ಊಹಿಸೋಣ. ಆದರೆ, ಉದ್ಯೋಗ ಅವಕಾಶಗಳೇ ಇಲ್ಲ. ಬ್ಯಾಂಕಿಂಗ್‌ ವಲಯದಲ್ಲಿ ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯಿಂದಾಗಿ ಉದ್ಯೋಗಾವಕಾಶಗಳು ಕ್ಷೀಣಿಸಿವೆ. ಸರ್ಕಾರದ ನೇಮಕಾತಿ ಪ್ರಕ್ರಿಯೆಗಳೂ ನಿಂತಿವೆ. ಹೀಗಿರುವಾಗ ಇನ್ನೆಲ್ಲಿವೆ ಕೆಲಸಗಳು? ಎಂದು ಪ್ರಶ್ನಿಸಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್, ಗಡ್ಕರಿ ಜೀ ಇದು ತುಂಬಾ ಒಳ್ಳೆಯ ಪ್ರಶ್ನೆ, ಪ್ರತಿಯೊಬ್ಬ ಭಾರತೀಯನೂ ಇದೇ ಪ್ರಶ್ನೆ ಕೇಳುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

Rahul gandhi,Nitin gadkari,”Where Are The Jobs?

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ