‘ಗ್ಲೋಬಲ್ ಸೂಪರ್ ಸ್ಟಾರ್ ನಿಂದ ಎಲ್ಲ ದಾಖಲೆಗಳ ಪತನ ಖಂಡಿತಾ’: ಆಸಿಸ್ ಮಾಜಿ ನಾಯಕ ಸ್ಟೀವ್ ವಾ

ಸಿಡ್ನಿ: ಎಡ್ಜ್ ಬ್ಯಾಸ್ಟನ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಗೆಲುವಿಗೆ ಮುಳುವಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ಜಾಗತಿಕ ಸೂಪರ್ ಸ್ಚಾರ್ ಎಂದು ಆಸಿಸ್ ಮಾಜಿ ನಾಯಕ ಸ್ಚೀವ್ ವಾ ಕೊಂಡಾಡಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದ್ದು, ಭಾರತಕ್ಕೆ ಗೆಲ್ಲಲು 84 ರನ್ ಗಳ ಅವಶ್ಯಕತೆ ಇದ್ದು, 43 ರನ್ ಗಳಿಸಿರುವ ಕೊಹ್ಲಿ ಮತ್ತು 18 ರನ್ ಗಳಿಸಿರುವ ದಿನೇಶ್ ಕಾರ್ತಿಕ್ ಕ್ರೀಸ್ ನಲ್ಲಿ ಮುಂದುವರೆದಿದ್ದಾರೆ. ಮೊದಲ ಇನ್ನಿಂಗ್ಸ್ ನಂತೆಯೇ ಎರಡನೇ ಇನ್ನಿಂಗ್ಸ್ ನಲ್ಲೂ ಇಂಗ್ಲೆಂಡ್ ವೇಗಕ್ಕೆ ಕೊಹ್ಲಿ ಬ್ರೇಕ್ ಹಾಕಿದ್ದು, ಭಾರತ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದಾರೆ.
ಇದರ ನಡುವೆಯೇ ಆಸ್ಟ್ರೇಲಿಯಾ ಕ್ರಿಕೆಟ್ ದಂತಕಥೆ ಮತ್ತು ಆಸಿಸ್ ಮಾಜಿ ನಾಯಕ ಸ್ಟೀವ್ ವಾ ಅವರು ವಿರಾಟ್ ಕೊಹ್ಲಿ ಅವರನ್ನು ಗ್ಲೋಬಲ್ ಸೂಪರ್ ಸ್ಟಾರ್ ಎಂದು ಕರೆದಿದ್ದು, ಅಲ್ಲದೆ ಕ್ರಿಕೆಟ್ ನ ಎಲ್ಲ ದಾಖಲೆಗಳನ್ನೂ ಕೊಹ್ಲಿ ಮುರಿಯಲಿದ್ದಾರೆ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಹೇಳಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ