ಅಖಂಡ ಕರ್ನಾಟಕವನ್ನ ಎತ್ತಿಹಿಡಿದ ಉತ್ತರ ಕರ್ನಾಟಕ ಮಂದಿ

ಗದಗ:ಆ-೨: ಕರ್ನಾಟಕ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗದಗ ಜಿಲ್ಲೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬಂದ್ ಕರೆಗೆ ಯಾವುದೇ ಬೆಂಬಲ ದೊರೆತಿಲ್ಲ. ಸಂಘಟನೆಗಳು ಬಂದ್ ಬೆಂಬಲ ಹಿಂಪಡೆಯುವ ಮೂಲಕ ಅಖಂಡ ಕರ್ನಾಟಕವನ್ನ ಎತ್ತಿಹಿಡದಿದ್ದಾರೆ.

ರಾಜ್ಯ ಒಡೆಯುವಂತಹ ಜನ್ರಿಗೆ ಉತ್ತರ ಕರ್ನಾಟಕ ಮಂದಿ ತಕ್ಕಪಾಠ ಕಲಿಸಿದ್ದಾರೆ. ಅಭಿವೃದ್ದಿಗಾಗಿ ನಮ್ಮ ಹೋರಾಟ ಪ್ರತ್ಯೇಕ ರಾಜ್ಯಕ್ಕಾಗಿ ಅಲ್ಲ. ಒಗ್ಗಟ್ಟಿನ ಮೂಲಮಂತ್ರ ಜಪಿಸುವ ಮೂಲಕ ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನ ತೋರಿಸಿಕೊಟ್ಟಿದ್ದಾರೆ.

ಗದಗ ಜಿಲ್ಲೆಯಲ್ಲಿ ಶಾಲಾ-ಕಾಲೇಜ್, ಸರ್ಕಾರಿ ಕಛೇರಿಗಳು, ಬಸ್, ಅಟೋ ಸಂಚಾರ ಎಂದಿನಂತೆ ಕಾರ್ಯನಿರ್ವಹಿಸುತ್ತಿವೆ. “ಕನ್ನಡಾಂಬೆಗೆ ಜಯವಾಗಲಿ” “ಕರ್ನಾಟಕ ಮಾತಾಕಿ ಜೈ” “ಒಂದೇ ಮಾತರಂ” ಎಂಬ ಘೋಷಣೆಗಳೊಂದಿಗೆ ಕನ್ನಡ ತಾಯಿಯ ಮಕ್ಕಳು ನಾವೆಲ್ಲಾ ಒಂದು ಎಂಬುದನ್ನ ಮತ್ತೊಮ್ಮೆ ಸಾರಿ ಸಾರಿ ಹೇಳಿದ್ದಾರೆ.

ಇನ್ನು ಕೆಲ ಕನ್ನಡಪರ ಸಂಘಟನೆಗಳು ಉತ್ತರ ಕರ್ನಾಟಕ ಅಭಿವೃದ್ಧಿಗೆ ಒತ್ತಾಯಿಸಿ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಿದ್ದಾರೆ. ಒಟ್ಟಾರೆಯಾಗಿ ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಗದಗ ಜಿಲ್ಲೆಯಲ್ಲೂ ಪ್ರತ್ಯೇಕ ರಾಜ್ಯಕ್ಕೆ ಗುಡ್ ಬಾಯ್ ಹೇಳುವ ಮೂಲಕ ಕನ್ನಡಿಗರೆಲ್ಲಾ ಒಂದೆ ಎಂದು ಸಾಭಿತುಮಾಡಿ ತೋರಿಸಿದ್ದಾರೆ.
North Karnataka,No bandh,Gadag

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ