ಬೆಂಗಳೂರು: ಆಗಸ್ಟ್ 1 ರಿಂದ ಬೆಂಗಳೂರು- ಗುವಾಹಟಿ -ಬೆಂಗಳೂರು ಮಾರ್ಗಕ್ಕೆ ಜೆಟ್ ಏರ್ವೇಸ್ ಸಂಸ್ಥೆ ವಿಮಾನ ಸಂಚಾರ ಆರಂಭಿಸಲಿದೆ,
ಬೆಂಗಳೂರು ಗುವಾಹಟಿ ಜೊತೆಗೆ ಹೈದರಾಬಾದ್-ಇಂಡೋರ್- ಚಂಡಿಗಡ ಮಾರ್ಗ ಸಂಚಾರ ಕೂಡ ಆರಂಭವಾಗಲಿದೆ.
ಬೆಳಗ್ಗೆ 10.15ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನ ಮಧ್ಯಾಹ್ನ 1.15ಕ್ಕೆ ಗುವಾಹಟಿ ತಲುಪಲಿದೆ, ಮತ್ತೆ ಸಂಜೆ 4.20ಕ್ಕೆ ಹೊರಡುವ ವಿಮಾನ ಬೆಂಗಳೂರಿಗೆ ರಾತ್ರಿ 7.30ಕ್ಕೆ ತಲುಪಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಿದೆ, ಬೆಂಗಳೂರು ಗುವಾಹಟಿಗೆ ಪ್ರತಿದಿನ ವಿಮಾನ ಸಂಚಾರ ಇರಲಿದೆ.
ಇನ್ನೂ ಆಗಸ್ಚ್ 1 ರಿಂದ ಇಂದೋರ್ ಚಂಡಿಗಡ ಮತ್ತು ಹೈದರಾಬಾದ್ ಗೂ ವಿಮಾನ ಸಂಚಾರ ಆರಂಭಿಸಲಿದ್ದು, ವಾರದಲ್ಲಿ ನಾಲ್ಕು ದಿನ ಅಂದರೆ, ಸೋಮವಾರ, ಬುಧವಾರ, ಶುಕ್ರವಾರ ಮತ್ತು ಬಾನುವಾರ ಮಾತ್ರ ವಿಮಾನ ಸೇವೆ ಇರಲಿದೆ.