ಮೆಕ್ಸಿಕೋನಲ್ಲಿ 100 ಪ್ರಯಾಣಿಕರಿದ್ದ ವಿಮಾನ ಪತನ!

ಮೆಕ್ಸಿಕೋ: 100 ಪ್ರಯಾಣಿಕರನ್ನು ಹೊತ್ತು ಟೇಕ್​ ಆಫ್ ಆದ ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿದೆ. ಮೆಕ್ಸಿಕೋದ ರಾಜಧಾನಿ ಡುರಾಗೊಂ ವಿಮಾನ ನಿಲ್ದಾನದಿಂದ ಹೊರಟ ವಿಮಾನ ಅಪಘಾತಕ್ಕೀಡಾಗಿದೆ.

97 ಮಂದಿ ಪ್ರಯಾಣಿಕರು, ಮೂವರು ಸಿಬ್ಬಂದಿಯಿದ್ದ ವಿಮಾನ ಹವಾಮಾನ ವ್ಯಪರಿತ್ಯದಿಂದ ನೆಲಕ್ಕಪ್ಪಳಿಸಿದೆ ಎನ್ನಲಾಗುತ್ತಿದೆ. ರನ್ ವೇನಿಂದ ಹೊರಟ ವಿಮಾನ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿದ್ದು, 85 ಮಂದಿ ಗಾಯಗೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ಯಾವುದೇ ಪ್ರಾಣಹಾನಿ ಬಗ್ಗೆ ವರದಿಯಾಗಿಲ್ಲ.ವಿಮಾನ ಟೇಕ್​ ಆಫ್​ ಆಗುತ್ತಿದ್ದಂತೆ ವಿಮಾನದಲ್ಲಿ ಹಿಂಬದಿ ಬೆಂಕಿ ಕಾಣಿಸಿಕೊಂಡಿದೆ.  ಮಳೆ ಹಾಗೂ ಸಿಡಿಲಿನಿಂದ ವಿಮಾನಯಾನಕ್ಕೆ ಅಡ್ಡಿಯಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ