ಉರುಳಿ ಬಿದ್ದ ರೈಲು ತಪ್ಪಿದ ಅನಾಹುತ

ಹುಬ್ಬಳ್ಳಿ-: ಪೆಟ್ರೋಲ್ ಸಾಗಿಸುತ್ತಿದ್ದ ಗೂಡ್ಸ್ ವಾಹನ ಹಳಿ ತಪ್ಪಿದ ಘಟನೆ ನಗರದ ರೇಲ್ವೆ ನಿಲ್ದಾಣದ ಸೌಥ್ ಬ್ಲಾಕ್‌ನಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ. ಹಾಸನದಿಂದ ನವಲೂರಿನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ಗೆ ಗೂಡ್ಸ್ ರೈಲಿನ ಮೂಲಕ ಪೆಟ್ರೋಲ್ ಸಾಗಿಸಲಾಗುತ್ತಿದ್ದ, ಗೂಡ್ಸ್ ರೂಲು ಹುಬ್ಬಳ್ಳಿ ರೇಲ್ವೆ ನಿಲ್ದಾಾಣಕ್ಕೆ ಒಂದುವರೆ ಕಿ.ಮೀ. ದೂರವಿದೆ ಎನ್ನುವಾಗಲೇ ಬೆಳಗ್ಗೆ 11.10ರ ಸುಮಾರಿಗೆ ಏಕಾಏಕಿ ಟ್ಯಾಂಕರ್ ಗೂಡ್ಸ್ ಹಳಿತಪ್ಪಿದೆ. ನಾಲ್ಕು ಬೋಗಿಗಳ ಮೂರು ಚಕ್ರಗಳು ಹಳಿ ತಪ್ಪಿ ಅಲ್ಲಿಯೇ ಉರುಳಿವೆ. ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲವಾದರೂ, ಹುಬ್ಬಳ್ಳಿಯಿಂದ ಬೇರೆಡೆಗೆ ಹಾಗೂ ಹುಬ್ಬಳ್ಳಿಗೆ ಆಗಮಿಸಬೇಕಾದ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಇದರಿಂದ ಪ್ರಯಾಣಿಕರು ಪರದಾಡುವಂತಾಯಿತು.

ಹುಬ್ಬಳ್ಳಿ ರೇಲ್ವೆ ನಿಲ್ದಾಣಕ್ಕೆ ಆಗಮಿಸಬೇಕಾಗಿದ್ದ ಸೊಲ್ಲಾಪುರ-ಧಾರವಾಡ ಪ್ಯಾಸೇಂಜರ್ ರೈಲನ್ನು ಸಿಗ್ನಲ್ ಸಮೀಪವೇ ನಿಲ್ಲಿಸಿ, ಅಲ್ಲಿಂದ ಪ್ರಯಾಣಿಕರನ್ನು ಎನ್‌ಡಬ್ಲ್ಯೂಕೆಎಸ್‌ಟಿಸಿ ಮೂರು ಬಸ್ ಮೂಲಕ ಧಾರವಾಡಕ್ಕೆ ಕರೆದೊಯ್ಯಲಾಯಿತು. ವಿಜಯವಾಡ-ಹುಬ್ಬಳ್ಳಿ ಅಮರಾವತಿ ಎಕ್ಸ ಪ್ರೆಸ್ ರೈಲಿನ ಮೂಲಕ ಹುಬ್ಬಳ್ಳಿಯಿಂದ ಪ್ರಯಾಣಿಸುವ ಪ್ರಯಾಣಿಕರಿಗೆ ಕುಸಗಲ್ ರೇಲ್ವೆ ನಿಲ್ದಾಾಣದಿಂದ ಪ್ರಯಾಣಿಸಲು ರೇಲ್ವೆ ಇಲಾಖೆ ಬಸ್ ಸೌಲಭ್ಯ ಒದಗಿಸಿಕೊಟ್ಟಿತ್ತು. ಅದರಂತೆ ಹುಬ್ಬಳ್ಳಿಯಿಂದ ಹೊರಡುವ ಹುಬ್ಬಳ್ಳಿ-ವಿಜಯವಾಡ ಅಮರಾವತಿ ಎಕ್ಸಪ್ರೆಸ್ ರೈಲನ್ನು ಅಣ್ಣಿಗೇರಿ ರೇಲ್ವೆ ನಿಲ್ದಾಣದಿಂದ ಸಂಚರಿಸಲು ವ್ಯವಸ್ಥೆ ಮಾಡಿ, ಹುಬ್ಬಳ್ಳಿಯ ಯಿಂದ ಅಣ್ಣಿಗೇರಿ ರೇಲ್ವೆ ನಿಲ್ದಾಣದವರೆಗೆ ಪ್ರಯಾಣಿಕರನ್ನು ಕರೆದೊಯ್ಯಲು ಹದಿನೈದು ಬಸ್‌ಗಳನ್ನು ವ್ಯವಸ್ಥೆ ಮಾಡಿತ್ತು. ರೇಲ್ವೆ ಪ್ರಯಾಣಿಕರನ್ನು ನಿಗದಿತ ಸ್ಥಳಕ್ಕೆ ಬಿಡಲು ಒಟ್ಟು ಇಪ್ಪತೈದು ಬಸ್‌ಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

ಹುಬ್ಬಳ್ಳಿಯಿಂದ ಸೊಲ್ಲಾಾಪುರಕ್ಕೆ ಸಂಚರಿಸಬೇಕಾಗಿದ್ದ ಹುಬ್ಬಳ್ಳಿ- ಪ್ಯಾಾಸೆಂಜರ್(56906) ರೈಲನ್ನು ರದ್ದು ಪಡಿಸಲಾಗಿತ್ತು. ಅದರಂತೆ, ಸೊಲ್ಲಾಾಪುರ-ಧಾರವಾಡ ಪ್ಯಾಾಸೆಂಜರ್(56903), ಅರಸಿಕೇರೆ-ಹುಬ್ಬಳ್ಳಿ ಪ್ಯಾಾಸೆಂಜರ್(56273), ಹುಬ್ಬಳ್ಳಿ-ಅರಸಿಕೇರಿ ಪ್ಯಾಾಸೆಂಜರ್(56274), ವಿಜಯವಾಡ-ಹುಬ್ಬಳ್ಳಿ ಎಕ್ಸ ಪ್ರೆಸ್(17225), ಹುಬ್ಬಳ್ಳಿ-ವಿಜಯವಾಡ ಎಕ್ಸ ಪ್ರೆಸ್(17226), ಸೊಲ್ಲಾಪುರ ಎಕ್ಸ ಪ್ರೆಸ್(11423), ಹುಬ್ಬಳ್ಳಿ- ಸೊಲ್ಲಾಪುರ ಎಕ್ಸ ಪ್ರೆಸ್(11424), ಸೊಲ್ಲಾಪುರ-ಹುಬ್ಬಳ್ಳಿ ಪ್ಯಾಾಸೆಂಜರ್(56905), ಧಾರವಾಡ-ಸೊಲ್ಲಾಪುರ ಪ್ಯಾಸೆಂಜರ್(56904) ರೈಲನ್ನು ಸಹ ರದ್ದು ಪಡಿಸಲಾಗಿತ್ತು. ವಾಸ್ಕೋಡಿಗಾಮಾ-ಹೌರಾ ಎಕ್ಸ ಪ್ರೆಸ್ ರೈಲಿನ ಮಾರ್ಗ ಬದಲಾವಣೆ ಮಾಡಿ, ಹುಬ್ಬಳ್ಳಿ ಸೌಥ್ ಬೈಪಾಸ್ ಮೂಲಕ ಕುಸಗಲ್‌ನಿಂದ ಗದಗಗೆ ಹಾಗೂ ಮನಗುರು-ಛತ್ರಪತಿ ಶಿವಾಜಿ ಮಹರಾಜ ಟರ್ಮಿನಲ್ ಎಕ್ಸ ಪ್ರೆಸ್ ರೈಲನ್ನು ಸಹ ಹುಬ್ಬಳ್ಳಿ ಸೌಥ್ ಬೈಪಾಸ್ ಮೂಲಕ ಕುಸಗಲ ರೇಲ್ವೆ ನಿಲ್ದಾಣಕ್ಕೆ ಮಾರ್ಗ ಬದಲಾಯಿಸಲಾಗಿತ್ತು.

ರೇಲ್ವೆ ಆಗಮನ ಮತ್ತು ನಿರ್ಗಮನದ ಸಮಯದಲ್ಲಾಾದ ಬದಲಾವಣೆ, ಮಾರ್ಗ ಬದಲಾವಣೆಯಾದ ರೈಲಿನ ಮಾಹಿತಿ ಹಾಗೂ ರದ್ದಾದ ರೈಲುಗಳ ಮಾಹಿತಿ ನೀಡಲು ಹುಬ್ಬಳ್ಳಿ ರೇಲ್ವೆ ನಿಲ್ದಾಾಣದಲ್ಲಿ ಸಹಾಯ ಕೇಂದ್ರ ತೆರೆಯಲಾಗಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ