ಸ್ಯಾಂಡಲ್ ವುಡ್ ಖಳನಟನ ವಿರುದ್ಧ ಬ್ಲ್ಯಾಕ್ ಮೇಲ್ ಆರೋಪ

ಬೆಂಗಳೂರು:ಜು-೩೧:ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಮಾಡಿದ ಆರೋಪದ ಮೇಲೆ ಖ್ಯಾತ ಖಳನಟ ಧರ್ಮ ವಿರುದ್ಧ ದೂರು ದಾಖಲಾಗಿದೆ.

ಶೂಟಿಂಗ್ ಇದೆಯೆಂದು ಮಹಿಳೆಯನ್ನು ಕರೆಸಿಕೊಂಡ ಧರ್ಮ, ಆಕೆ ಬಂದ ತಕ್ಷಣ ಶೂಟಿಂಗ್ ರದ್ದಾಗಿದೆ ಎಂದು ಹೇಳಿ ಊಟಕ್ಕೆಂದು ಹೋಟೆಲ್​ಗೆ ಕರೆದೊಯ್ದಿದ್ದು, ಈ ವೇಳೆ ಊಟದಲ್ಲಿ ಮತ್ತು ಬರುವ ಔಷಧಿ ಹಾಕಿ ಅಶ್ಲೀಲ ವಿಡಿಯೋ ಮಾಡಿ, ಮನೆಗೆ ಹೇಳುವುದಾಗಿ ಬೆದರಿಕೆ ಹಾಕಿದ್ದಾರೆ.

ಅಲ್ಲದೇ ವಿಡಿಯೋವನ್ನು ಮಹಿಳೆಯ ಮನೆಯವರಿಗೆ ಕಳಿಸುವುದಾಗಿ ಬೆದರಿಕೆ ಹಾಕಿ 14 ಲಕ್ಷ ಹಣ ಸುಲಿಗೆ ಮಾಡಿದ್ದಾರೆ. ಬೇಸತ್ತ ಸಂತ್ರಸ್ತ ಮಹಿಳೆ ಬೇಗೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ನೀಡಿ ಎರಡು ತಿಂಗಳಾಗಿದ್ದರೂ ಇದುವರೆಗೂ ಧರ್ಮ ನನ್ನು ಪೊಲೀಸರು ಬಂಧಿಸಿಲ್ಲ. ಧರ್ಮ ತಲೆ ಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳುತ್ತಿದ್ದಾರೆ ಎಂದು ತಿಳಿದುಬಂದಿದೆ.

Woman Alleges Of Blackmail From Actor Dharma, Complaint Lodged In Begur Police Station

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ