ಪ್ರತ್ಯೇಕ ರಾಜ್ಯಕ್ಕೆ ಬೆಂಬಲವಿಲ್ಲ

ಹುಬ್ಬಳ್ಳಿ:- ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಬರುವ ಅಗಷ್ಟ 2 ರಂದು ಕೆಲ ಸಂಘಟನೆ ನೀಡಿರುವ ಉತ್ತರ ಕರ್ನಾಟಕ 13 ಜಿಲ್ಲೆ ಬಂದ್ ಕರೆಗೆ ನಮ್ಮ ಬೆಂಬಲವಿಲ್ಲ ಎಂದು ಕರವೆ ಜಿಲ್ಲಾಧ್ಯಕ್ಷ ಅಮೃತ ಇಜಾರೆ ಹಾಗೂ ಸಿಐಟಿಯು ಅಧ್ವಕ್ಷ ಮಹೇಶ ಪತ್ತಾರ ಸ್ಪಷ್ಟ ಪಡಿಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ವಿವಿಧ ಸಂಘಟನೆಯ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗು ಕೇವರ ತಾಜಕೀಯ ಹಿತಾಶಕ್ತಿಯಾಗಿದೆ. ಅಧಿಕಾರದ ದಾಹಕ್ಕಾಗಿ ಮಾತ್ರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬೇಡಿಕೆಯ ಮಾತು ಕೆಲ ರಾಜಕಾರಣಿಗಳು ಆಡುತ್ತಿದ್ದಾರೆ. ಉತ್ತರ ಕರ್ನಾಟಕಕ್ಕೆ ಆದಂತಹ ಅನ್ಯಾಯ ಸರಿ ಪಡಿಸುವ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಮಹದಾಯಿ ವಿವಾದ, ನಂಜುಂಡಪ್ಪ ಯೋಜನೆ ಸೇರಿದಂತೆ ಈ ಭಾಗದ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ‌ ಸಧನದಲ್ಲಿ ಬೇಡಿಕೆ ಇಡಬೇಕಿತ್ತು. ಈ ಭಾಗದ ಎಲ್ಲ ರಾಜಕಾರಣಿಗು ಒಂದಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ. ಅದನ್ನ ಬಿಟ್ಟು ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಉದ್ದೇಶಕ್ಕಾಗಿ ನಡೆಯುವ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಕರ್ನಾಟಕ ರಕ್ಷಣಾ ವೇದಿಕೆ, ಕಾರ್ಮಿಕ ಸಂಘಟ‌ನೆ, ಅಟೋ ರಿಕ್ಷಾ ಮಾಲೀಕರ ಹಾಗೂ ಚಾಲಕರ ಸಂಘ, ಮಹದಾಯಿ ಕಳಸಾ ಬಂಡೂರಿ ಹೋರಾಟ ಸಮನ್ವಯ ಸಮಿತಿ, ದಲಿತಪರ ಸಂಘಟನೆ ಸೇರಿದಂತೆ ವಿವಿಧ ಸಂಘಟನೆಗಳ ಬೆಂಬಲವಿಲ್ಲ ಎಂದು ಹೇಳಿದರು. ಕೆಲ ವರ್ಷಗಳ ಹಿಂದೆ ಆಂದ್ರ ಹಾಗೂ ತೆಲಂಗಾಣ ವಿಭಜನೆಯಾಗಿದೆ. ಆದರೆ, ಆ ವಿಭಜನೆಯಿಂದ ಸಮಸ್ಯೆಗಳು ಎದುರಾಗಿವೆ. ಹೀಗಾಗಿ ಪ್ರತ್ಯೇಕ ರಾಜ್ಯದ ಘೋಷಣೆಯಿಂದ ಉತ್ತರ ಕರ್ನಾಟಕದ ಅಭಿವೃದ್ದಿಯು ನಿರೀಕ್ಷತ ಮಟ್ಟದಲ್ಲಿ ಸಹಕಾರಿ ಆಗುವುದಿಲ್ಲ. ಹೀಗಾಗಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಬೆಂಬಲ ಇಲ್ಲ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ