ಎನ್ಆರ್​ಸಿ ಕುರಿತಂತೆ ಚರ್ಚಿಸಲು ಸರ್ವಪಕ್ಷ ಸಭೆ ಕರೆಯಬೇಕು: ಕಾಂಗ್ರೆಸ್

ನವದೆಹಲಿ:ಜು-೩೦:ಎನ್ಆರ್​ಸಿ ಕುರಿತಂತೆ ಚರ್ಚಿಸಲು ಕೇಂದ್ರ ಸರ್ಕಾರ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು. ಒಬ್ಬ ಬಾರತೀಯ ನಾಗರಿಕನನ್ನೂ ಲೆಕ್ಕದಿಂದ ಹೊರಗಿಡಲಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಈ ವಿಷಯದ ಬಗ್ಗೆ ಯಾವುದೇ ರಾಜಕೀಯ ಬೇಡ. ಕೇಂದ್ರ ಸರ್ಕಾರ ಸರ್ವಪಕ್ಷಗಳ ನಾಯಕರ ಸಭೆ ಕರೆಯಬೇಕು. ಹಾಗೆಯೇ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಬಗೆಗೆ ಸಭಗೆ ಮಾಹಿತಿ ನೀಡಬೇಕು ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಆನಂದ್ ಶರ್ಮಾ ಹೇಳಿದ್ದಾರೆ. ನಾಳೆಯೇ ಸಭೆ ನಡೆದರೆ ಅದು ಸೂಕ್ತವಾಗಿರಲಿದೆ ಎಂದು ಹೇಳಿದ್ದಾರೆ.

ಎನ್ಆರ್​ಸಿ ಗೆ ಸಂಬಂಧಿಸಿ ಎಲ್ಲಾ ವಿಷಗಳು ಗೊಂದಲಮುಕ್ತವಾಗುವವರೆಗೆ ಯಾವೊಬ್ಬ ಪ್ರಜೆ ಅಥವಾ ಕುಟುಂಬ ಬೇರೆ ಹೋಗಬಾರದು ಎಂದು ಅವರು ಅಭಿಪ್ರಾಯಪಟ್ಟರು. ಎನ್ಆರ್​ಸಿ ವಿಂಗಡನೆಯು ಅಂತರಾಷ್ಟ್ರೀಯ ಪ್ರಾಮುಖ್ಯತೆಯನ್ನು ಹೊಂದಿದ್ದು ಬಾಂಗ್ಲಾದೇಶವನ್ನು ಒಳಗೊಂಡಂತೆ ನೆರೆಯ ದೇಶಗಳೊಂದಿಗೆ ಇದು ಸಂಬಂಧ ಹೊಂದಿದೆ. ಇದರಿಂದಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಣಾಮಗಳಾಗುತ್ತದೆ. ಎನ್ಆರ್​ಸಿ ಅಂತಿಮ ವರದಿ ರೂಪಿಸುವಾಗ ಅನುಸರಿಸಿದ ವಿಧಾನದ ಬಗೆಗೆ ಪ್ರಶ್ನೆಗಳಿವೆ. ಒಟ್ಟಾರೆ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಮೇಲೆ ಪ್ರಶ್ನೆಗಳು ಎದ್ದಿದೆ. ಹೀಗಾಗಿ ಸರ್ಕಾರ ಎಲ್ಲಾ ಬಗೆಯ ನ್ಯೂನತೆಯನ್ನು ಪರಿಹರಿಸಬೇಕು. ಈ ಹಿಂದೆ ರಾಜೀವ್ ಗಾಂಧಿ ಅವರ ಕಾಲದಲ್ಲಿ ನಡೆದಿದ್ದ 1985 ರ ಅಸ್ಸಾಂ ಒಪ್ಪಂದವು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂತ್ರವಾಗಿದೆ. ಹೀಗಾಗಿ ಇದನ್ನೇ ಮಾನದಂಡವಾಗಿರಿಸಿಕೊಂಡು ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

Convene All-Party Meeting On Assam Citizen Registry Issue: Congress

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ