ಪ್ರಧಾನಿ ಮೋದಿ ಮೇಲೆ ರಾಸಾಯನಿಕ ದಾಳಿ ಬೆದರಿಕೆಯೊಡ್ಡಿದ್ದ ವ್ಯಕ್ತಿ ಬಂಧನ

ಮುಂಬೈ:ಜು-೩೦: ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ ಆರೋಪದ ಮೇಲೆ ಮುಂಬೈ ಪೊಲೀಸರು ಸೆಕ್ಯೂರಿಟಿ ಗಾರ್ಡ್​ ಒಬ್ಬನನ್ನು ಬಂಧಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಪಡೆ (ಎನ್​ಎಸ್​ಜಿ)ಯ ಕಂಟ್ರೋಲ್​ ರೂಂ.ಗೆ ಶುಕ್ರವಾರ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಪ್ರಧಾನಿಯ ಮೇಲೆ ರಾಸಾಯನಿಕ ದಾಳಿ ನಡೆಸುವುದಾಗಿ ಬೆದರಿಕೆ ಒಡ್ಡಿದ್ದ. ತಕ್ಷಣ ಕಾರ್ಯಪ್ರವೃತ್ತರಾದ ಎನ್​ಎಸ್​ಜಿ ಪಡೆ ಕರೆ ಬಂದಿದ್ದ ದೂರವಾಣಿ ಸಂಖ್ಯೆಯ ಬೆನ್ನತ್ತಿದಾಗ ಕರೆ ಮುಂಬೈನಿಂದ ಬಂದಿರುವುದು ತಿಳಿದು ಬಂದಿತ್ತು.

ಅಲ್ಲದೇ ಎನ್​ಎಸ್​ಜಿ ಪಡೆ ಕರೆ ಮಾಡಿದ ವ್ಯಕ್ತಿಯನ್ನು ಬಂಧಿಸುವಂತೆ ಮುಂಬೈ ಪೊಲೀಸರಿಗೆ ಸೂಚಿಸಿತ್ತು. ಅದರಂತೆ ಪೊಲೀಸರು ಜಾರ್ಖಂಡ್​ ಮೂಲದ ಕಾಶಿನಾಥ್​ ಮಂಡಲ್​ ಎಂಬಾತನನ್ನು ಬಂಧಿಸಿದ್ದಾರೆ. ಈತ ಮುಂಬೈನ ವಾಕೇಶ್ವರ್​ ಪ್ರದೇಶದಲ್ಲಿ ವಾಸಿಸುತ್ತಿದ್ದು, ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡುತ್ತಿದ್ದ. ಕರೆ ಮಾಡಿದ ನಂತರ ಆತ ಸೂರತ್​ಗೆ ಹೋಗುವ ರೈಲು ಹತ್ತಲು ಮುಂಬೈ ಸೆಂಟ್ರಲ್​ ರೈಲ್ವೆ ನಿಲ್ದಾಣಕ್ಕೆ ತೆರಳಿದ್ದ. ಅಲ್ಲಿ ಆತನನ್ನು ಬಂಧಿಸಲಾಗಿದೆ.

ವಿಚಾರಣೆಯಲ್ಲಿ ಈತ ಎನ್​ಎಸ್​ಜಿ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದು ತಾನೇ ಎಂದು ಒಪ್ಪಿಕೊಂಡಿದ್ದಾನೆ. ಸಮಾಜದಲ್ಲಿ ಭಯದ ವಾತಾವರಣ ಮೂಡಿಸಲು, ಕೋಮು ಗಲಭೆ ಸೃಷ್ಟಿಸಲು ಮತ್ತು ಭಾರತೀಯರ ಮಧ್ಯೆ ಶತೃತ್ವವನ್ನು ಹುಟ್ಟಿಹಾಕಲು ಈ ಕೆಲಸ ಮಾಡಿದೆ ಎಂದು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

Man Allegedly Warns Of “Chemical Attack” On PM In Phone Call, Arrested

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ