ಚಂದ್ರಗ್ರಹಣ ಸಂದರ್ಭದಲ್ಲಿ ಕಳ್ಳರ ಕೈಚಳಕ

Varta Mitra News

ಮೈಸೂರು, ಜು.28- ಚಂದ್ರಗ್ರಹಣ ಸಂದರ್ಭದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿ ಸುಮಾರು ಎಂಟು ಅಂಗಡಿಗಳಲ್ಲಿ ಸರಣಿ ಕಳ್ಳತನ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಕನಕದಾಸನಗರದ ನೇತಾಜಿವೃತ್ತ ಬಳಿ ಇರುವ ಅಂಗಡಿಗಳಲ್ಲಿ ನಿನ್ನೆ ಮಧ್ಯ ರಾತ್ರಿ ಕಳ್ಳತನವಾಗಿದೆ.
ಮೆಡಿಕಲ್ ಸ್ಟೋರ್, ಪ್ರಾವಿಸನ್ ಸ್ಟೋರ್‍ಗಳಲ್ಲಿ ರೋಲಿಂಗ್ ಶೆಟ್ಟರ್‍ಗಳನ್ನು ಮೀಟಿ ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ವಸ್ತು ಹಾಗೂ ನಗದು ದೋಚಿದ್ದಾರೆ.
ರೋಲಿಂಗ್ ಶೆಟರ್ ಮೀಟಲು ಹೈಡ್ರಾಲಿಕ್‍ಜಾಕ್ ಬಳಸಿರಬಹುದೆಂದು ಪೆÇಲೀಸರು ಶಂಕಿಸಿದ್ದಾರೆ. ಬೆಳಗ್ಗೆ ರೋಲಿಂಗ್ ಶೆಟರ್ ಮೀಟಿರುವುದನ್ನು ಕಂಡು ದಾರಿಹೋಕರು ಪೆÇಲೀಸರಿಗೆ ತಿಳಿಸಿದ್ದಾರೆ.
ಕುವೆಂಪುನಗರ ಠಾಣೆ ಪೆÇಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ