ಎಟಿಎಂನಲ್ಲಿ 16 ಲಕ್ಷ ರೂ. ಕಳ್ಳತನ, ಬಂಧನ

ಬೆಳಗಾವಿ,ಜು.28-ಎಟಿಎಂನಲ್ಲಿ 16 ಲಕ್ಷ ರೂ. ಕಳ್ಳತನ ಮಾಡಿ ದುಬೈಗೆ ಎಸ್ಕೇಪ್ ಆಗಿದ್ದ ಆರೋಪಿಯನ್ನು ಕಲಬುರಗಿ ಜಿಲ್ಲೆ ಚಿತ್ತಾಪುರ ಪೆÇಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಿಂತಕುಂಟ ಗ್ರಾಮದ ನಿವಾಸಿ ಶಿವಕುಮಾರ್(25) ಬಂಧಿತ ಆರೋಪಿ. ದುಬೈನಲ್ಲಿ ಆರೋಪಿಯನ್ನು ಇಂದು ಮುಂಜಾನೆ ಬಂಧಿಸಿ ಪೆÇಲೀಸರು ಕಲಬುರಗಿಗೆ ಕರೆತಂದಿದ್ದಾರೆ.
ಕಳೆದ ಜೂನ್ 6ರಂದು ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲ್ಲೂಕಿನ ಕುಂಬಾರಳ್ಳಿ ಗ್ರಾಮದಲ್ಲಿರುವ ಎಟಿಎಂ-1ನಲ್ಲಿ ಸಿಸಿಟಿವಿಗೆ ಛತ್ರಿಯನ್ನು ಅಡ್ಡವಿಡಿದು, ಎಟಿಎಂನ ಪಾಸ್‍ವರ್ಡ್ ಬಳಸಿ ಕಳ್ಳತನ ಮಾಡಿದ ಪ್ರಕರಣದಲ್ಲಿ ಪೆÇಲೀಸರು ಈಗಾಗಲೇ ಜಗದೇವಪ್ಪ(23), ಜಗನಾಥ(26) ಎಂಬುವರನ್ನು ಬಂಧಿಸಿದ್ದರು.
ಇವರಿಬ್ಬರು ನೀಡಿದ ಹೇಳಿಕೆ ಮೇರೆಗೆ ಪ್ರಕರಣದಲ್ಲಿ ಭಾಗಿಯಾಗಿ ದುಬೈಗೆ ಪರಾರಿಯಾಗಿದ್ದ ಮತ್ತೊಬ್ಬ ಆರೋಪಿಯಾದ ಶಿವಕುಮಾರ್‍ನನ್ನು ಇದೀಗ ಬಂಧಿಸಿ ಬೆಳಗಾವಿಗೆ ಕರೆತಂದಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ