ಸ್ಟ್ರೆಚರ್ ಸಿಗದೆ ಗರ್ಭಿಣಿಯ ಪರದಾಟ

ಬೀದರ್,ಜು.28- ವೈದ್ಯರ ಮುಷ್ಕರದಿಂದಾಗಿ ಸ್ಟ್ರೆಚರ್ ಸಿಗದೆ ಗರ್ಭಿಣಿಯೊಬ್ಬರು ಪರದಾಡಿದ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಇಂದು ನಡೆದಿದೆ. ಸ್ಟ್ರೆಚರ್ ಇದ್ದರೂ ಸಹ ಯಾರೂ ಕೊಡದಿದ್ದರಿಂದ ಮಹಿಳೆ ಸ್ವತಃ ತಾವೇ ಮಹಡಿ ಏರಿ ಹೆರಿಗೆ ವಾರ್ಡ್‍ಗೆ ತೆರಳಿದರು. ರಾಷ್ಟ್ರೀಯ ವೈದ್ಯಕೀಯ ಆಯೋಗದ ವಿಧೇಯಕ ವಿರೋಧಿಸಿ ಬೆಳಗ್ಗೆಯಿಂದಲೇ ವೈದ್ಯರ ಮುಷ್ಕರ ಆರಂಭವಾಗಿರುವುದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವಂತಾಗಿತ್ತು. ಬೀದರ್‍ನಲ್ಲಿ ಖಾಸಗಿ ಆಸ್ಪತ್ರೆಗಳು ಬಂದ್ ಆಗಿದ್ದವು. ಹೆರಿಗೆಗೆಂದು ಬಂದ ಮಹಿಳೆಯೊಬ್ಬರಿಗೆ ಸ್ಟ್ರೆಚರ್ ಸಿಗಲಿಲ್ಲ. ಕೇಳಿದರೂ ಅಲ್ಲಿನ ಸಿಬ್ಬಂದಿ ಮುಷ್ಕರದ ನೆಪವೊಡ್ಡಿದರು. ವಿಧಿಯಿಲ್ಲದೆ ಗರ್ಭಿಣಿ ಮಹಡಿ ಏರಿ ಹೆರಿಗೆ ವಾರ್ಡ್‍ಗೆ ತೆರಳಬೇಕಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ