ಜಿಲ್ಲೆಯಲ್ಲಿ ಕರಡಿ ದಾಳಿ

ತುಮಕೂರು, ಜು.28- ಜಿಲ್ಲೆಯಲ್ಲಿ ಕರಡಿ ದಾಳಿ ಮುಂದುವರೆದಿದ್ದು, ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ. ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯದ ದಿನೇಶ್(23) ಕರಡಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು.
ಇಂದು ಮುಂಜಾನೆ ದಿನೇಶ್ ಅವರು ಬಹಿರ್ದೆಸೆಗೆ ತೆರಳುತ್ತಿದ್ದಾಗ ಕರಡಿ ಎಲ್ಲಿ ಅಡಗಿ ಕುಳಿತಿತ್ತೋ ಏನೋ, ಏಕಾಏಕಿ ಇವರ ಮೇಲೆ ನೆಗೆದು ಬೀಳಿಸಿ ಮುಖ, ಕುತ್ತಿಗೆ, ಎದೆ ಭಾಗದಲ್ಲಿ ತರಚಿ ಗಂಭೀರ ಗಾಯಗೊಳಿಸಿದೆ. ಇವರು ಸಹಾಯಕ್ಕಾಗಿ ಚೀರಿಕೊಂಡಾಗ ಗ್ರಾಮಸ್ಥರು ದಾವಿಸಿ ಕರಡಿಯನ್ನು ಓಡಿಸಿ ಗಾಯಾಳು ದಿನೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಕರಡಿ ಹಾವಳಿಯಿಂದಾಗಿ ಗ್ರಾಮಸ್ಥರು ಹೈರಾಣಾಗಿದ್ದಾರೆ. ಮಕ್ಕಳು, ವೃದ್ಧರು ಹೊರಬರಲು ಹೆದರುವಂತಾಗಿದೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು, ಜು.28- ಜಿಲ್ಲೆಯಲ್ಲಿ ಕರಡಿ ದಾಳಿ ಮುಂದುವರೆದಿದ್ದು, ಇಂದು ಮುಂಜಾನೆ ಬಹಿರ್ದೆಸೆಗೆ ತೆರಳಿದ್ದ ವ್ಯಕ್ತಿ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದೆ.
ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ದೊಡ್ಡನರಸಯ್ಯನಪಾಳ್ಯದ ದಿನೇಶ್(23) ಕರಡಿ ದಾಳಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿರುವ ಗಾಯಾಳು.
ಇಂದು ಮುಂಜಾನೆ ದಿನೇಶ್ ಅವರು ಬಹಿರ್ದೆಸೆಗೆ ತೆರಳುತ್ತಿದ್ದಾಗ ಕರಡಿ ಎಲ್ಲಿ ಅಡಗಿ ಕುಳಿತಿತ್ತೋ ಏನೋ, ಏಕಾಏಕಿ ಇವರ ಮೇಲೆ ನೆಗೆದು ಬೀಳಿಸಿ ಮುಖ, ಕುತ್ತಿಗೆ, ಎದೆ ಭಾಗದಲ್ಲಿ ತರಚಿ ಗಂಭೀರ ಗಾಯಗೊಳಿಸಿದೆ. ಇವರು ಸಹಾಯಕ್ಕಾಗಿ ಚೀರಿಕೊಂಡಾಗ ಗ್ರಾಮಸ್ಥರು ದಾವಿಸಿ ಕರಡಿಯನ್ನು ಓಡಿಸಿ ಗಾಯಾಳು ದಿನೇಶ್ ಅವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆಗೆ ದಾಖಲಿಸಿದ್ದಾರೆ.
ಜಿಲ್ಲೆಯಲ್ಲಿ ಕರಡಿ ಹಾವಳಿಯಿಂದಾಗಿ ಗ್ರಾಮಸ್ಥರು ಹೈರಾಣಾಗಿದ್ದಾರೆ. ಮಕ್ಕಳು, ವೃದ್ಧರು ಹೊರಬರಲು ಹೆದರುವಂತಾಗಿದೆ ಎಂದು ಅರಣ್ಯಾಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ