ಮಹದಾಯಿಗೂ, ಪ್ರತ್ಯೇಕರಾಜ್ಯ ಹೋರಾಟಕ್ಕೂ ಸಂಬಂಧವಿಲ್ಲ

ಗದಗ:ಜು-೨೮ : ಮಹದಾಯಿ ಹೋರಾಟಕ್ಕೂ ಹಾಗೂ ಉತ್ತರಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿಗೂ ಸಂಬಂಧವಿಲ್ಲ ಅಂತ ರೈತಸೇನಾ ರಾಜ್ಯಾದ್ಯಕ್ಷ ವೀರೇಶ್ ಸೊಬರದಮಠ ಹೇಳಿದ್ದಾರೆ.

ಗದಗ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭೀವೃದ್ಧಿಯಾಗಿಲ್ಲ. ಅದರ ಬಗ್ಗೆ ನಮಗೂ ನೋವಿದೆ‌‌. ಉತ್ತರ ಕರ್ನಾಟಕ ಅಭೀವೃದ್ಧಿಯ ಹೋರಾಟಕ್ಕೆ ನಾವು ಕೈಜೋಡಿಸುತ್ತೇವೆ. ಆದ್ರೆ ಮಹದಾಯಿ ಹೋರಾಟ ಪ್ರತ್ಯೇಕ ರಾಜ್ಯದ ಕೂಗಿಗೆ ಬಳಸೋದು ಸರಿಯಲ್ಲ. ಮಹದಾಯಿ ಹೋರಾಟ ಅಖಂಡ ಕರ್ನಾಟಕದ ಹೋರಾಟ. ಇದು ಉತ್ತರಕರ್ನಾಟಕ್ಕೆ ಸೀಮಿತವಾದ ಹೋರಾಟವಲ್ಲ. ದೇಶದಲ್ಲೆ ಪ್ರಚಲಿತವಿರೋ ಹೋರಾಟ.

ಉತ್ತರಕರ್ನಾಟಕ ಅಭೀವೃದ್ದಿಯಾಗಬೇಕಾದ್ರೆ ಜನಪ್ರತಿನಿಧಿಗಳ ಮನೆ ಮುಂದೆ ಪ್ರತಿಭಟಿಸಬೇಕು. ಜಾತಿಯಿಂದ ಕ್ರೂಢಿಕರಣವಾಗಿ ಉತ್ತರ ಕರ್ನಾಟಕ ಅಭೀವೃದ್ದಿ ಕಂಡಿಲ್ಲ. ಜಾತಿ ಹೋಗಲಾಡಿಸಿ ನಾವೆಲ್ಲ ಒಗ್ಗಟ್ಟು ತೋರಿಸಿದ್ರೆ ರಾಜಕಾರಣಿಗಳು ಉತ್ತರ ಕರ್ನಾಟಕ ಅಭೀವೃದ್ದಿ ಪಡಿಸ್ತಾರೆ. ರಾಜಕಾರಣಿಗಳ ಇಚ್ಛಾಸಕ್ತಿ ಕೊರತೆಯಿಂದ ಮಹದಾಯಿ ಹಾಗೂ ಉತ್ತರ ಕರ್ನಾಟಕ ಅಭಿವೃದ್ಧಿ ಕಂಡಿಲ್ಲ ಅಂತ ಹೇಳಿದರು.

Mahadai,Northern State separate fight,Not related,Vireesh Sobaradamatha

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ