ಪ್ರಪಾತಕ್ಕೆ ಉರುಳಿದ ಬಸ್: ಉಪನ್ಯಾಸಕರು ಸೇರಿ 33 ಜನ ಸಾವು

ಮುಂಬೈ:ಜು-೨೮: ಉಪನ್ಯಾಸಕರು ಸೇರಿದಂತೆ 40 ಮಂದಿ ಪ್ರವಾಸಕ್ಕೆ ಹೊರಟಿದ್ದ ಬಸ್ ವೊಂದು 200 ಅಡಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ 33 ಮಂದಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ರಾಯಗಡ ಜಿಲ್ಲೆಯ ಮಹಾಬಲೇಶ್ವರ ರಸ್ತೆಯ ಅಂಬೆನೆಲಿ ಘಾಟ್‌ನಲ್ಲಿ ಖಾಸಗಿ ಬಸ್ 200 ಅಡಿ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಬಸ್ಸಿನಲ್ಲಿ ರತ್ನಗಿರಿಯ ಶಾಲೆಯೊಂದರ 34 ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಿಬ್ಬಂದಿ ಪ್ರಯಾಣಿಸುತ್ತಿದ್ದರು.

ಇದುವರೆಗೆ 10 ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎನ್‌ಡಿಆರ್‌ಎಫ್ ತಂಡ ಘಟನಾ ಸ್ಥಳಕ್ಕೆ ತೆರಳಿದ್ದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ.

Maharashtra,33 Dead After Bus Falls Down Mountain in Ambenali

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ