ಭಾರತಕ್ಕೆ ಆಗಮಿಸಲಿದ್ದಾರೆ ಚೀನಾ ರಕ್ಷಣಾ ಸಚಿವರು

ಜೊಹಾನ್ಸ್ ಬರ್ಗ್:ಜು-೨೭: ಮುಂದಿನ ತಿಂಗಳು ಚೀನಾ ರಕ್ಷಣಾ ಸಚಿವರು ಭಾರತಕ್ಕೆ ಭೇಟಿ ನೀಡಲು ಮತ್ತು ತಮ್ಮ ಇತ್ತೀಚಿನ ಮಾತುಕತೆಗಳ, ಒಪ್ಪಂದದ ಅನುಷ್ಠಾನನಕ್ಕೆ ಕ್ರಮ ಕೈಗೊಳ್ಳಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಚೀನಾದ ಅಧ್ಯಕ್ಷ ಕ್ಸಿಜಿನ್ ಪಿಂಗ್ ಸಮ್ಮತಿ ಸೂಚಿಸಿದ್ದಾರೆ.

ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಜೊಹಾನ್ಸ್ ಬರ್ಗ್ ಗೆ ಆಗಮಿಸಿರುವ ಪ್ರಧಾನಿ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಭೇಟಿಯಾದರು. ಈ ವೇಳೆ ಉಬಯ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳಿಸಲು, ಈ ಒಪ್ಪಂದಗಳ ಅನುಷ್ಟಾನದ ವೇಗ ಹೆಚ್ಚಿಸಿಕೊಳ್ಳುವುದು ಅಗತ್ಯವಾಗಿದೆ. ಇದಕ್ಕಾಗಿ ನಮ್ಮ ನಡುವಿನ ಮಾತುಕತೆ ನಿಯತವಾಗಿರಬೇಕು.ಅಗತ್ಯವಾದಾಗ ಸರಿಯಾದ ಸೂಚನೆಗಳನ್ನು ನೀಡಬೇಕು ಮೋದಿ ಚೀನಾ ಅಧ್ಯಕ್ಷರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಾಲ್ ಅವರನ್ನು ಗಡಿ ವಿವಾದ ಸಂಬಂಧ ನಡೆಯುವ ವಿಶೇಷ ಪ್ರತಿನಿಧಿ ಮಟ್ಟದ ಮಾತುಕತೆಗೆ ಈ ವರ್ಷ ಚೀನಾಗೆ ಕಳಿಸಲು ಪ್ರಧಾನಿ ಮೋದಿ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಇತ್ತೀಚಿನ ಸಭೆಗಳು ದ್ವಿಪಕ್ಷೀಯ ಸಂಬಂಧಗಳಿಗೆ ಹೊಸ ಶಕ್ತಿಯನ್ನು ನೀಡಿದೆ. ಎರಡು ರಾಷ್ಟ್ರಗಳ ಪರಸ್ಪರ ಸಹಕಾರಕ್ಕಾಗಿ ಹೊಸ ಅವಕಾಶ ಒದಗಿಸಲಾಗುತ್ತದೆ ಎಂದರು.

ಇನ್ನು ವುಹಾನ್ ನಲ್ಲಿನ ಅನೌಪಚಾರಿಕ ಭೇಟಿಯ ಬಳಿಕ ದ್ವಿಪಕ್ಷೀಯ ಸಂಬಂಧಗ ಸಮರ್ಪಕ ಮುಂದುವರಿಕೆಗೆ ಚೀನಾ ತಂಡವು ಭಾರತದೊಂದಿಗೆ ಕೆಲಸ ಮಾಡಲು ಸಿದ್ಧವಾಗಿದೆ ಎಂದು ಅಧ್ಯಕ್ಷ ಕ್ಸಿ ಹೇಳಿದ್ದಾರೆ.

ಮಹತ್ವದ ವಿಭಾಗಗಳಲ್ಲಿನ ಸಂಪರ್ಕ ಬಲವರ್ಧನೆ, ಪರಸ್ಪರ ವಿಶ್ವಾಸ ಹೆಚ್ಚಳ, ಪ್ರಾಯೋಗಿಕ ಸಹಕಾರಕ್ಕೆ ಉತ್ತೇಜನ, ಸಾಂಸ್ಕೃತಿಕ ವಿನಿಮಯ ಹಾಗೂ ಭಿನ್ನಾಭಿಪ್ರಾಯಗಳ ಸಮರ್ಪಕ ನಿರ್ವಹಣೆ ಕುರಿತಂತೆ ಎರಡೂ ದೇಶದ ನಾಯಕರು ಮಾತನಾಡಿದ್ದಾರೆ.

ಜೊಹಾನ್ಸ್ ಬರ್ಗ್ ಸಭೆಯು ನಮಗೆ ಚೀನಾದೊಡನೆ ಅಭಿವೃದ್ಧಿ ಪಾಲುದಾರಿಕೆಯನ್ನು ಬಲಪಡಿಸಲು ಮತ್ತಷ್ಟು ಅವಕಾಶವನ್ನು ಒದಗಿಸಿದೆ ಎಂದು ಮೋದಿ ಹೇಳಿದ್ದಾರೆ. ಎರಡೂ ರಾಷ್ಟ್ರಗಳು ಗಡಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿಕೊಳ್ಳುವುದು,ಅಗತ್ಯವಾಗಿದೆ. ಈ ಸಂಬಂಧ ಅವರು ತಮ್ಮ ಸೇನಾ ನಾಯಕರಿಗೆ ಪರಸ್ಪರ ಸಂವಹನ ನಡೆಸಲು ಸೂಚಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದಾರೆ. ಮೋದಿ ಹಾಗೂ ಕ್ಸಿ ಅವರಿಗೆ ಈ ಮಾತುಕತೆ ತೃಪ್ತಿ ತಂದಿದೆ ಎಂದು ಅವರು ಹೇಳಿದ್ದಾರೆ.

PM Modi-Xi jinping talks, Chinese defence minister, India meet

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ