ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌: ರೇಣುಕಾಚಾರ್ಯ

ರಾಮನಗರ:ಜು-೨೬: ಯುದ್ಧ ಆರಂಭವಾಗಿದೆ, ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌ ಮಾಡುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ.

ಬಿಜೆಪಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ರೇಣುಕಾಚಾರ್ಯ, ಕೆಂಗಲ್ ದೇವಾಲಯದಲ್ಲಿ‌ ಪೂಜೆ ಸಲ್ಲಿಸಿ ಧರ್ಮ ಯುದ್ಧ ಸಾರುತ್ತಿದ್ದೀವಿ.ಬಿ.ಎಸ್ ಯಡಿಯೂರಪ್ಪ ಸಿ.ಎಂ ಆಗುವರೆಗೆ ಹೋರಾಟ‌ ಮಾಡುತ್ತೇವೆ ಎಂದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೇಲೆ ರಾಜ್ಯದ ಜನ ಭರವಸೆ ಇಟ್ಟಿದ್ರು, ರಾಜ್ಯ ಅಭಿವೃದ್ಧಿಯಾಗಬೇಕಾದ್ರೆ ಸಂಪೂರ್ಣ ಸಾಲ ಮನ್ನ ಮಾಡಬೇಕು. ಒಂದು ಭಾಗಕ್ಕೆ ಮಾತ್ರ ಸೀಮಿತವಾಗದೇ, ರಾಜ್ಯಕ್ಕೆ ಕೆಲಸ ಮಡಬೇಕು. ದಾವಣಗೆರೆ ಕಡೆಯಲ್ಲೂ‌ ಯಾವುದೇ ಅಭಿವೃದ್ಧಿಯಾಗಿಲ್ಲ. ಹೀಗೇ ಮುಂದುವರೆದರೆ ಸಿ.ಎಂ ಕುಮಾರಸ್ವಾಮಿ ಅವರ ಅಧಿಕಾರ ಶಾಶ್ವತವಾಗಿ ಇರೋದಿಲ್ಲ ಎಂದರು.

ಮುಂದಿನ ದಿನದಲ್ಲಿ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ. ಕುಮಾರಸ್ವಾಮಿ ಅವರು ತುಂಬ ದಿನ ಅಧಿಕಾರದಲ್ಲಿ ಉಳಿಯೋದಿಲ್ಲ, ಕುಮಾರಸ್ವಾಮಿ ಅವರ ಆಡಳಿತ ಅಂತ್ಯ ಆಗುವವರೆಗೆ ಹೋರಾಟ ಮಾಡುತ್ತೇವೆ ಕುಮಾರಸ್ವಾಮಿ ಲೋಕಾಸಭೆ ಚುನಾವಣೆಗು ಮುನ್ನವೇ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ