ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣ: ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಬೆಂಬಲವಿದೆ ಎಂದ ದಾಳಿಕೋರರು

ಜೈಪುರ:ಜು-೨೪: ಆಳ್ವಾರ್ ಸಾಮೂಹಿಕ ಹಲ್ಲೆ ಪ್ರಕರಣದ ದಾಳಿಕೋರುರು ನಮ್ಮೊಂದಿಗೆ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರಿದ್ದು, ನಮ್ಮನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ ಹೀಗೆಂದು ದಾಳಿಕೋರರು ಮಾತನಾಡುತ್ತಿದ್ದರು ಎಂದು ಪ್ರಕರಣದ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ರಾಜಸ್ಥಾನದ ಆಳ್ವಾರ್ ಜಿಲ್ಲೆಯಲ್ಲಿ ರಕ್ಬರ್ ಖಾನ್ ಎಂಬ 28 ವರ್ಷ ವಯಸ್ಸಿನ ಯುವಕನ ಮೇಲೆ ಗುಂಪೊಂದು ಸಾಮೂಹಿಕ ಹಲ್ಲೆ ನಡೆಸಿತ್ತು. ಅಸ್ಲಾಂ ಎಂಬ ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಹರಿಯಾಣದ ನೂಹ್ ಜಿಲ್ಲೆ ಕೊಲ್ಗಾಂವ್ ಎಂಬ ಗ್ರಾಮದಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.

ಆಳ್ವಾರ್’ನ ಖಾನ್ಪುರದಲ್ಲಿ 2 ಹಸುಗಳನ್ನು ಖರೀದಿ ಮಾಡಿದ ಬಳಿಕ ನಾನು ಮತ್ತು ರಕ್ಬರ್ ಹಸುಗಳನ್ನು ಕರೆದುಕೊಂಡು ಕಾಲ್ನಡಿಗೆ ಮೂಲಕ ಗ್ರಾಮಕ್ಕೆ ಹೋಗುತ್ತಿದ್ದೆವು. ಈ ವೇಳೆ ವಿರುದ್ಧ ದಿಕ್ಕಿನಲ್ಲಿ ದ್ವಿಚಕ್ರ ವಾಹನವೊಂದು ಬಂದಿತ್ತು. ವಾಹನ ಬರುತ್ತಿದ್ದುದ್ದನ್ನು ಕಂಡ ಹಸುಗಳು ಹತ್ತಿರದಲ್ಲಿದ್ದ ಹೊಲಕ್ಕೆ ಇಳಿದು ಓಡಲು ಆರಂಭಿಸಿದವು. ರಕ್ಬರ್ ಮತ್ತು ನಾನು ಹಸುಗಳನ್ನು ಹಿಡಿಯಲು ಮುಂದಾಗಿದ್ದೆವು. ಈ ವೇಳೆ 7 ಮಂದಿ ಲಾಠಿ ಹಿಡಿದು ನಮ್ಮ ಸುತ್ತ ನಿಂತರು. ಅದೃಷ್ಟವಶಾತ್ ನಾನು ಸ್ಥಳದಿಂದ ತಪ್ಪಿಸಿಕೊಂಡೆ. ಆದರೆ, ರಕ್ಬರ್ ಮೇಲೆ ಆ ಗುಂಪು ಲಾಠಿಗಳಿಂದ ಹೊಡೆಯಲು ಆರಂಭಿಸಿದ್ದರು ಎಂದು ಹೇಳಿದ್ದಾರೆ.

ಹಲ್ಲೆ ನಡೆಸುತ್ತಿದ್ದ ವೇಳೆ ಗುಂಪು ಒಬ್ಬರ ಹೆಸರನ್ನು ಒಬ್ಬರು ಹೇಳುತ್ತಿದ್ದರು. 7 ಮಂದಿಯ ಪೈಕಿ ವಿಜಯ್, ಧರ್ಮೇಂದ್ರ, ಪರಮ್ಜೀತ್, ನರೇಶ್ ಮತ್ತು ಸುರೇಶ್ ಎಂಬಐವರ ಹೆಸರುಗಳು ನೆನಪಿನಲ್ಲಿವೆ. ಹಲ್ಲೆ ನಡೆಸುತ್ತಿದ್ದ ವೇಳೆ ಗುಂಪು ಬಿಜೆಪಿ ಶಾಸಕರೊಬ್ಬರ ಹೆಸರನ್ನೂ ಹೇಳುತ್ತಿದ್ದರು. ನಮಗೆ ಬಿಜೆಪಿ ಶಾಸಕ ಜ್ಞಾನ್ ದೇವ್ ಅಹುಜಾ ಅವರ ಬೆಂಬಲವಿದ್ದು, ನಮ್ಮನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂದು ಅಸ್ಲಾಮ್ ಅವರು ತಿಳಿಸಿದ್ದಾರೆ.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜಸ್ಥಾನ ಡಿಜಿಪಿ ಒಪಿ.ಗಲ್ಹೋತ್ರಾ ಅವರು, ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ರಾಜ್ಯ ಗೃಹ ಸಚಿವ ಗುಲಾಬ್ ಚಂದ್ ಕಟಾರಿಯಾ ಹೇಳಿದ್ದಾರೆ.

Rajasthan BJP MLA Gyan Dev Ahuja,with us, Alwar lynch mob

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ