ಚಂದ್ರಗ್ರಹಣ: ಜು.27ಕ್ಕೆ ಕಾಣಿಸಲಿದೆ ದೀರ್ಘಾವಧಿಯ ಬ್ಲಡ್ ಮೂನ್

ಬೆಂಗಳೂರು: ದೀರ್ಘಾವಧಿಯದ್ದು ಎನ್ನಲಾಗುತ್ತಿರುವ ಚಂದ್ರಗ್ರಹಣವು ಜು.27 ರ ಮಧ್ಯರಾತ್ರಿ ನಡೆಯಲಿದೆ. ವಿಶೇಷವೆಂದರೆ, ಇದೇ ಸಮಯದಲ್ಲಿ ಮಂಗಳ ಗ್ರಹವು ಚಂದ್ರನ ಸಮೀಪ ಬರಲಿದೆ.
ಸಾಮಾನ್ಯವಾಗಿ ಚಂದ್ರಗ್ರಹಣ ಮೂರರಿಂದ ನಾಲ್ಕು ಗಂಟೆಗಳ ಅವಧಿಯದ್ದಾಗಿರುತ್ತದೆ. ಹಿಂದಿನ ಚಂದ್ರಗ್ರಹಣಗಳಿಗೆ ಹೋಲಿಸಿದರೆ ಈ ಬಾರಿಯ ಚಂದ್ರಗ್ರಹಣ ಸ್ವಲ್ಪ ಹೆಚ್ಚು ನಿಮಿಷ ಕಾಣಿಸಲಿದೆ. ಇದು ಶತಮಾನದ ಅತಿ ದೀರ್ಘಾವಧಿಯ ಚಂದ್ರಗ್ರಹಣವೆಂದು ಗುರುತಿಸಲಾಗಿದೆ. ಭೂಮಿಯ ನೆರಳು ಚಂದ್ರನನ್ನು ಸಂಪೂರ್ಣವಾಗಿ ಆವರಿಸಿಕೊಂಡ ಬಳಿಕ ಚಂದ್ರನ ಬಣ್ಣ ನಸುಗೆಂಪು ಬಣ್ಣಕ್ಕೆ ತಿರುಗಲಿದೆ. ಜ.31 ರಂದು ಚಂದ್ರಗ್ರಹಣವಾಗಿದ್ದಾಗ ಇದೇ ರೀತಿ ಕಂಡುಬಂದಿತ್ತು. ಅಂದಿನ ಚಂದ್ರನನ್ನು ‘ಸೂಪರ್ ಬ್ಲಡ್ ಮೂನ್’ ಎಂದು ಕರೆದರೆ, ಈ ಬಾರಿ ಗ್ರಹಣಕ್ಕೊಳಗಾಗುತ್ತಿರುವ ಚಂದ್ರನಿಗೆ ‘ಬ್ಲಡ್ ಮೂನ್’ ಎಂದು ಹೆಸರಿಸಲಾಗಿದೆ.
ಮಂಗಳ ಗ್ರಹವೂ ಚಂದ್ರನ ಸಮೀಪಕ್ಕೆ ಬರಲಿರುವುದು ಈ ಬಾರಿಯ ಚಂದ್ರಗ್ರಹಣದ ವಿಶೇಷ. ಅತಿ ದೀರ್ಘಾವಧಿ ಕೆಂಪು ಚಂದ್ರ ಬಾನಂಗಳದಲ್ಲಿ ಗೋಚರಿಸುತ್ತಾನೆ. ನೂರು ವರ್ಷಗಳಿಗೊಮ್ಮೆ ನಭೋಮಂಡಲದಲ್ಲಿ ಇಂತಹದ್ದೊಂದು ಕೌತುಕ ಸಂಭವಿಸುತ್ತದೆ. ಚಂದ್ರಗ್ರಹಣವನ್ನು ಬರಿಗಣ್ಣಿನಲ್ಲೇ ನೋಡಲು ಸಾಧ್ಯವಿದೆ. ಜತೆಗೆ ಸಮೀಪದಲ್ಲೇ ಬರುವ ಮಂಗಳ ಗ್ರಹವನ್ನೂ ನೋಡಬಹುದು.
ಸಮಯ
ಜವಹರಲಾಲ್ ನೆಹರು ತಾರಾಲಯದ ಮಾಹಿತಿಯಂತೆ, ಜು.27 ರಂದು ಮಧ್ಯರಾತ್ರಿ 11.54 ಗಂಟೆಗೆ ಚಂದ್ರಗ್ರಹಣ ಆರಂಭವಾಗಲಿದೆ. ಶುಭ್ರ ಆಕಾಶವಿದ್ದರೆ ಚಂದ್ರಗ್ರಹಣವನ್ನು ಸುಲಭವಾಗಿ ವೀಕ್ಷಿಸಬಹುದು. ರಾತ್ರಿ 1 ಗಂಟೆಗೆ ಭೂಮಿಯ ನೆರಳು ಸಂಪೂರ್ಣವಾಗಿ ಚಂದ್ರನನ್ನು ಆವರಿಸಿ ಕೆಂಪಾಗಿಸಲಿದೆ. ನಂತರ 2.43 ಗಂಟೆವರೆಗೂ ಇದೇ ರೀತಿ ಗ್ರಹಣದ ಪೂರ್ಣ ಸ್ಥಿತಿ ಇರಲಿದೆ. ಬಳಿಕ ನೆರಳು ಬಿಟ್ಟುಕೊಳ್ಳುತ್ತಾ ಗ್ರಹಣ ಮುಗಿಯಲಿದೆ. ರಾತ್ರಿ 3.49 ಗಂಟೆಗೆ ಗ್ರಹಣ ಸಂಪೂರ್ಣವಾಗಿ ಬಿಡಲಿದೆ.
‘‘ಪ್ರತಿ ವರ್ಷ ನಡೆಯುವ ಚಂದ್ರಗ್ರಹಣಕ್ಕೆ ಹೋಲಿಸಿದರೆ ಈ ಚಂದ್ರಗ್ರಹಣವು ಕೆಲ ನಿಮಿಷಗಳ ಕಾಲ ಹೆಚ್ಚಾಗಿರಲಿದೆ. ಬೆಂಗಳೂರಿನ ತಾರಾಲಯದಲ್ಲಿ ಚಂದ್ರನನ್ನು ಸಮೀಪದಲ್ಲಿ ನೋಡಲು ವ್ಯವಸ್ಥೆ ಮಾಡುವ ಬಗ್ಗೆ ಚರ್ಚೆಯಾಗಿದೆ,’’ ಎಂದು ,’’ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಜಿ.ಗಲಗಲಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಸ್ಪಷ್ಟ ಗೋಚರ
ದಕ್ಷಿಣ ಅಮೆರಿಕ, ಪೂರ್ವ ಆಫ್ರಿಕಾ, ಮಧ್ಯ ಪ್ರಾಚೀನ ಏಷ್ಯಾಖಂv, ಯೂರೋಪ್ಗಳಲ್ಲಿ ಕಾಣುತ್ತದೆ. ಗ್ರಹಣ ಕಾಲದಲ್ಲಿ ಚಂದ್ರನು ಕಾರ್ಗತ್ತಲಲ್ಲಿ
ಮರೆಯಾಗುವ ಘಟನೆಗೆ ಉಂಬ್ರ ಎನ್ನುತ್ತಾರೆ. ಈ ಸಮಯದಲ್ಲಿ ಕೆಲ ಹೊತ್ತು ಚಂದ್ರ ಕಾಣಿಸುವುದಿಲ್ಲ. ವಿಜ್ಞಾನದ ದೃಷ್ಟಿಯಿಂದಲೂ ಈ ಬಾರಿಯ ಚಂದ್ರ
ಗ್ರಹಣ ಅತಿ ವಿಶೇಷವೆನಿಸಿದೆ.

ಗ್ರಹಣ ಮಾಹಿತಿ
ದಿನ: ಜು.27 ರಂದು
ಸ್ಪರ್ಶ: ಮಧ್ಯರಾತ್ರಿ 11.54ಗೆ
ಕೆಂಪಗೆ ಕಾಣುವುದು: ರಾತ್ರಿ 1 ಗಂಟೆ
ಸಂಪೂರ್ಣ ಕೆಂಪಗಿನ ಸ್ಥಿತಿ: 2.43 ಗಂಟೆವರೆಗೂ
ಮೋಕ್ಷ ಕಾಲ: 3.49 ಗಂಟೆಗೆ
ಒಟ್ಟಾರೆ ಗ್ರಹಣದ ಕಾಲಾವಧಿ: 4ಗಂಟೆ(1.43 ನಿಮಿಷ ಕೆಂಪುಬಣ್ಣದಿಂದ ಕಾಣಲಿದೆ)

ಜನ್ಮರಾಶಿಯವರ ಗ್ರಹಣ ಫಲ
ಶುಭ ಫಲ: ಮೇಷ, ಸಿಂಹ, ವೃಶ್ಚಿಕ, ಮೀನ ರಾಶಿ
ಮಿಶ್ರಫಲ: ವೃಷಭ,ಕರ್ಕ, ಕನ್ಯಾ, ಧನು ರಾಶಿ
ತೊಂದರೆ: ತುಲಾ, ಮಿಥುನ, ಮಕರ, ಕುಂಭ ರಾಶಿ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ