ನಾಗರಹಾವು ಚಿತ್ರ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಗೆ

ಗದಗ:ಜು-೨೨ : ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನ ಮೂಡಿಸಿದ್ದ “ನಾಗರಹಾವು” ಸಿನಿಮಾ, ಈಗ ಡಿಟಿಎಸ್ ಸೌಂಡ್ ಮೂಲಕ ಮತ್ತೆ ಬೆಳ್ಳಿ ಪರದೆಯ ಮೇಲೆ ಮಿಂಚಲಾರಂಭಿಸಿದೆ.

ಗದಗ ನಗರದ ಮಹಾಲಕ್ಷ್ಮಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿರುವ ಚಲನಚಿತ್ರಕ್ಕೆ ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಜೂನಿಯರ್ ವಿಷ್ಣುವರ್ಧನ್ ಪ್ರಕಾಶ ಪತ್ತಾರ್, ಜೂನಿಯರ್ ರಾಜಕುಮಾರ ಅಶೋಕ ಕಿರಟಗೇರಿ ತಮ್ಮ ವೇಷಭೂಷಣ ದೊಂದಿಗೆ ಅಭಿನಯಿಸಿದರು.

ಇಂದು ಮಹಾಲಕ್ಷ್ಮಿ ಚಿತ್ರಮಂದಿರದಲ್ಲಿ ಸಾಹಸ ಸಿಂಹ ಡಾ, ವಿಷ್ಣುವರ್ಧನ್ ರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪುಷ್ಫ ಅರ್ಪಿಸಿ ಜೈ ಘೋಷಹಾಕುವ ಮೂಲಕ ಅಭಿಮಾನ ಮೆರೆದರು. ಇನ್ನು ಈ ಕಾರ್ಯಕ್ರಮದಲ್ಲಿ ಚಿತ್ರಮಂದಿರದ ಮಾಲಿಕರು ಸೇರಿದಂತೆ ವಿಷ್ಣುವರ್ಧನ್ ಅನೇಕ ಅಭಿಮಾನಿಗಳು, ಸಿನಿಪ್ರಿಯರು ಭಾಗವಹಿಸಿದ್ದರು. ನಂತರ ಚಿತ್ರವಿಕ್ಷಣೆಗೆ ಬಂದ ಪ್ರೇಕ್ಷಕರಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದ್ರು.

nagarahavu new version, 2018 kannada movie

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ