ನಟ ಕಿಚ್ಚ ಸುದೀಪ್ ರನ್ನು ಭೇಟಿಯಾದ ಶಾಸಕ ಶ್ರೀರಾಮುಲು

ಬೆಂಗಳೂರು:ಜು-೨೩: ಶಾಸಕ ಬಿ. ಶ್ರೀರಾಮಲು, ನಟ ಕಿಚ್ಚ ಸುದೀಪ್​ ಅವರನ್ನು ಇಂದು ಭೇಟಿಯಾದರು.

‘ಸಮರ್ಥನೆಗಾಗಿ ಸಂಪರ್ಕ’ ಪ್ರಚಾರಾಂದೋಲನದ ಭಾಗವಾಗಿ ಶ್ರೀರಾಮು ಸುದೀಪ್ ಅವರನ್ನು ಅವರ ಮನೆಯಲ್ಲಿ ಈ ಭೇಟಿಯಾದರು. ಈ ವೇಳೆ ಮೋದಿ ಸರ್ಕಾರ ಜನತೆಗೆ ನೀಡಿದ್ದ ಆಶ್ವಾಸನೆಗಳನ್ನ ಈಡೇರಿಸಿರುವ ಬಗ್ಗೆ ಮಾಹಿತಿ ಇರುವ ಪುಸ್ತಕವನ್ನು ಸುದೀಪ್​ ಅವರಿಗೆ ನೀಡಲಾಯಿತು.

ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ‘ಸಮರ್ಥನೆಗಾಗಿ ಸಂಪರ್ಕ ಅಭಿಯಾನ’ ಪ್ರಾರಂಭಿಸಲಾಗಿದೆ. ಈಗಾಗಲೇ ಸಾಕಷ್ಟು ಗಣ್ಯವ್ಯಕ್ತಿಗಳನ್ನು ಭೇಟಿ ಮಾಡಿ ಮೋದಿ ಸಾಧನೆಯ ಪುಸ್ತಕ ನೀಡಲಾಗಿದೆ.

Sri Ramulu, Kiccha Sudeep,Sampark for Samarthan campaign,achievements of PM Narendra Modi’s govt

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ