ನರಗುಂದ ರೈತ ಬಂಡಾಯಕ್ಕೆ 38 ವರ್ಷ

ಗದಗ:ಜು-21: ನರಗುಂದ ಬಂಡಾಯಕ್ಕೀಗ 38 ವರ್ಷ. ಹೋರಾದಲ್ಲಿ ಪ್ರಾಣತೆತ್ತ ರೈತರಿಗೆ ಶ್ರದ್ದಾಂಜಲಿ ಸಲ್ಲಿಸೋ ಸಮಯ. ಬಂಡಾಯದ ನೆಲದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರಾರಂಭವಾದ ನಿರಂತರ ಹೋರಾಟ. ಎರಡು ದಶಕಗಳು ಕಳೆದರು ರೈತರ ಕನಸು ಮಾತ್ರ ಈಡೇರಿಲ್ಲ. ಆದ್ರೆ ಸದ್ಯ ಹೋರಾಟಗಾರರಲ್ಲೇ ಭಿನ್ನಮತ ಸ್ಪೋಟಗೊಂಡಿದ್ದು, ರೈತ ಬಂಡಾಯಕ್ಕೆ ಹೆಸರಾದ ಬಂಡಾಯದ ನೆಲದ ಹೋರಾಟದ ಹಾದಿ ತಪ್ಪುವ ಆತಂಕ ಎದುರಾಗಿದೆ.

ಇಂದು ನರಗುಂದ ಬಂಡಾಯಯದಲ್ಲಿ ಸಾವನ್ನಪ್ಪಿದ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಸ್ಮರಣೆಯ ದಿನ. ಬಂಡಾಯದ ಮೂಲಕ ರಾಷ್ಟ್ರದ ಗಮನ ಸೆಳೆದಿತ್ತು ನರಗುಂದ ಬಂಡಾಯ. ಬಂಡಾಯದ ನಾಡಲ್ಲಿ ಕಳೆ ಗುಂದುತ್ತಿದೆ ಕಳಸಾ ಕಹಳೆ.

ಇದು ಗದಗ ಜಿಲ್ಲೆ ನರಗುಂದ ಪಟ್ಟಣದಲ್ಲಿ ಮಹದಾಯಿ ಹೋರಾಟದ ಸಧ್ಯದ ಪರಿಸ್ಥಿತಿ. ಜುಲೈ 21ಕ್ಕೆ ನರಗುಂದ ಬಂಡಾಯಕ್ಕೆ 38 ವರ್ಷ. ಆದ್ರೆ ಇತ್ತಿಚೆಗೆ ಕೆಲ ವರ್ಷದಿಂದ ಬಂಡಾಯದ ನಾಡಲ್ಲಿ ಮತ್ತೆ ಮಹದಾಯಿ ಹೋರಾಟ ಆರಂಭವಾಯ್ತು. ಈ ಮೂಲಕ ಬಂಡಾಯದ ನಾಡಿನ ಮಹತ್ವ ಹೆಚ್ಚಿತ್ತು. ಆದ್ರೆ ಮೂರು ವರ್ಷದಿಂದ ನಿರಂತರವಾಗಿ ನಡೆದ ಹೋರಾಟದಲ್ಲಿ ಭಿನ್ನಮತ ಸ್ಪೋಟವಾಗಿದ್ದು ಕೊಂಚಮಟ್ಟಿಗೆ ಕಳಸಾ ಕಿಚ್ಚಿನ ಕಳೆ ಗುಂದಿದಂತಾಗಿದೆ. ನರಗುಂದದಲ್ಲಿನ 80ರ ದಶಕದಲ್ಲಿ ನಡೆದ ಘಟನೆ ಇನ್ನು ಬಹುತೇಕರ ಕಣ್ಣು ಕಟ್ಟಿದೆ. ಆದ್ರೆ ಇದೀಗ ಮಹದಾಯಿ ಹೋರಾಟ ದಿಕ್ಕು ತಪ್ಪುತ್ತಿರೋ ಆತಂಕ ಇಲ್ಲಿನ ರೈತರಿಗೆ ಎದುರಗಿದೆ.


ನೀರಾವರಿ ಶುಲ್ಕ ಸಂದಾಯದ ವಿಚಾರದಲ್ಲಿ ನಡೆದ ಹೋರಾಟದಲ್ಲಿ ರೈತ ವೀರಪ್ಪ ಕಡ್ಲಿಕೊಪ್ಪ ಗುಂಡಿನ ದಾಳಿಗೆ ಬಲಿಯಾಗಿದ್ರು. ಆದ್ರೆ ಮಹದಾಯಿ ಹೋರಾಟದಲ್ಲಿ ಪಾಲ್ಗೋಂಡ 11 ರೈತರು ಅಸುನೀಗಿದ್ದಾರೆ. ಕಳೆದ ಮೂರು ವರ್ಷಗಳಿಂದ ಈ ಭಾಗದ ರೈತರು, ಹೋರಾಟಗಾರರು ಯಾವೆಲ್ಲ ರೀತಿ ತಿರುವು ಪಡೆದುಕೊಂಡಿದೆ. ಇದೀಗ ತಮ್ಮಲ್ಲಿನ ಭಿನ್ನಮತದ ಮೂಲಕ ಹೊಸ ತಿರುವಿಗೆ ಕಾರಣವಾಗಿದೆ. ಮಹದಾಯಿ ಹೋರಾಟ ಸಮನ್ವಯ ಸಮಿತಿ ಸದಸ್ಯರೀಗ ದಯಾಮರಣದ ಮೂಲಕ ರಾಷ್ಟ್ರಪತಿಗಳಿಗೆ ನೀರು ಕೊಡಿ ಇಲ್ಲವೇ ದಯಾಮರಣಕ್ಕೆ ಅನುಮತಿ ನೀಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ. ಇಷ್ಟಾದ್ರು ಸರ್ಕಾರಗಳು ಮಾತ್ರ ಎಚ್ಚರಗೊಂಡಿಲ್ಲ. ರೈತರ ಸಹನೆ ಪರಿಕ್ಷಿಸುತ್ತಿರೋ ಸರ್ಕಾರ 80ರ ದಶಕದ ಘಟನೆ ಮರುಕಳಿಸದಂತೆ ನಡೆದುಕೊಳ್ಳಲಿ ಅನ್ನೋದು ಹೋರಾಟಗಾರರ ಆಕ್ರೋಶ. ಈ ಬಾರಿ ಮಹದಾಯಿ ಸಮನ್ವಯ ಸಮಿತಿ ವತಿಯಿಂದ ನಾಳೆ ರೈತ ಹುತಾತ್ಮ ದಿನಾಚರಣೆಯಲ್ಲಿ ಜನಪ್ರತಿನಿಧಿಗಳಿಗೆ ದಿನಾಚರಣೆಯಲ್ಲಿ ಪಾಲ್ಗೋಳ್ಳಲು ನಿಷೇಧಿಸಿ, ಹುತಾತ್ಮ ರೈತರಿಗೆ ಗೌರವ ಸಲ್ಲಿಸಲು ತೀರ್ಮಾನಿಸಿದ್ದಾರೆ.

ಮಹದಾಯಿ ಹೋರಾಟ ಪ್ರತಿ ವರ್ಷ ರೈತ ಹುತಾತ್ಮ ದಿನ ಬಂದ್ರೆ ಸಾಕು ತೀವ್ರ ಕಾವು ಪಡೆದುಕೊಳ್ಳುತ್ತಿತ್ತು. ಆದ್ರೆ ಇದೀಗ ಹೋರಾಟ ವೇದಿಕೆಯಲ್ಲಿಯೇ ಮಹದಾಯಿ ಮಹಾ ವೇದಿಕೆ‌ ನಿರ್ಮಾಣವಾಗಿದೆ. ವೇದಿಕೆಯ ವತಿಯಿಂದಲೂ ಪಟ್ಟಣದ ಅಳಗವಾಡಿ ರಸ್ತೆಯಲ್ಲಿ ಹುತಾತ್ಮ ದಿನಾಚರಣೆ ನಡೆಸಲಾಗ್ತಿದೆ. ದಯಾ ಮರಣದ ಬಗ್ಗೆ ವಿರೋಧ ವ್ಯಕ್ತ ಪಡಿಸಿ, ಮಹದಾಯಿಗಾಗಿ ಪ್ರಾಣ ಕೊಡೋದು ಬೇಡ ಎನ್ನುವ ಕುರಿತು ದಯಾಮರಣದ ಬಗ್ಗೆ ಹಾಗೂ ಮಹದಾಯಿ ಹೋರಾಟದ ಬಗ್ಗೆ ಜಾಗೃತಿಗಾಗಿ ಸಿದ್ಧತೆ ಕೈಗೊಂಡಿದೆ. ಈ ಮೂಲಕ ಇಬ್ಭಾಗವಾದ ಹೋರಾಟಗಾರರು ಈ ಬಾರಿ ಪ್ರತ್ಯೇಕವಾಗಿಯೇ‌ ಹುತಾತ್ಮ ದಿನಾಚರಣೆಗೆ ನಿರ್ಧರಿಸಿದ್ದಾರೆ.

ಮಹದಾಯಿ ಹೋರಾಟಗಾರರಾದ ವಿರೇಶ್ ಸೊಬರದಮಠ ಹಾಗೂ ಶಂಕರ ಅಂಬಲಿ ಅವರ ಈ ಭಿನ್ನಾಭಿಪ್ರಾಯ ಮಹದಾಯಿ ಹೋರಾಟದ ಇಬ್ಭಾಗಕ್ಕೆ ಕಾರಣವಾಗಿದೆ. ಇವರ ಭಿನ್ನಾಭಿಪ್ರಾಯ ಮಹದಾಯಿ ಹೋರಾಟವನ್ನು ಬಲಿ ತೆಗೆದುಕೊಳ್ಳದಿರಲಿ. ಹುತಾತ್ಮ ದಿನಾಚರಣೆ ರೈತರಲ್ಲಿನ ಹುಮ್ಮಸ್ಸು ಹೆಚ್ಚಿಸಿ ಸಂಘಟಿತ ಹೋರಾಟಕ್ಕೆ ಪ್ರೇರಣೆ ನೀಡುವಂತಾಗಲಿ ಅನ್ನೋದು ಬಹುತೇಕರ ಆಗ್ರಹ.

ನರಗುಂದ ರೈತ ಬಂಡಾಯ,38 ವರ್ಷ,ವೀರಪ್ಪ ಕಡ್ಲಿಕೊಪ್ಪ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ