ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬ ಆಶ್ಚರ್ಯಕರ ರೀತಿಯಲ್ಲಿ ರಕ್ಷಿಸಿದ ಸ್ಥಳೀಯರು

ಮುಂಬೈ:ಜು-17: ಪ್ರವಾಹದ ನೀರಿನಲ್ಲಿ ಮುಳುಗಿ ಕೊಚ್ಚಿಹೋಗುತ್ತಿದ್ದ ಕಾರಿನಲ್ಲಿದ್ದ ಕುಟುಂಬವನ್ನು ಹಗ್ಗದ ಸಹಾಯದಿಂದ ಸಿನಿಮೀಯ ರೀತಿಯಲ್ಲಿ ರಕ್ಷಣೆ ಮಾಡಿರುವ ಘಟನೆ ನವಿ ಮುಂಬೈನ ತಾಲೋಜಾದಲ್ಲಿ ನಡೆದಿದೆ.

ಕಾರು ನೀರಿನಲ್ಲಿ ಬಹುತೇಕ ಮುಳುಗಿದ್ದು, ಕುಟುಂಬ ಕಾರಿನ ಮೇಲೆ ಕುಳಿತಿದ್ದರು. ಸ್ಥಳೀಯರು ಒಬ್ಬರ ಹಿಂದೆ ಮತ್ತೊಬ್ಬರು ಹಗ್ಗವನ್ನು ಗಟ್ಟಿಯಾಗಿ ಹಿಡಿದು, ಅದರ ನೆರವಿನಿಂದ ಸುರಕ್ಷಿತವಾಗಿ ಕುಟುಂಬ ಇರುವ ಸ್ಥಳವನ್ನು ತಲುಪಿದ್ದು, ಮೊದಲು ಮಹಿಳೆಯನ್ನು ರಕ್ಷಿಸಿ ಕರೆತಂದಿದ್ದಾರೆ. ಬಳಿಕ ವ್ಯಕ್ತಿಯನ್ನು ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.

ಈ ಘಟನೆ ಸೋಮವಾರ ಮಧ್ಯಾಹ್ನ ತಾಲೋಜಾದ ಘೋಟ್ಗಾಂವ್‌ ಪ್ರದೇಶದಲ್ಲಿ ನಡೆದಿದೆ. ನದಿಯಲ್ಲಿ ನೀರಿನ ರಭಸಕ್ಕೆ ಕಾರು ಕೊಚ್ಚಿಹೋಗಿದೆ. ಕುಟುಂಬ ಕಾರನ್ನು ಹಿಡಿದು ಜೀವ ಉಳಿಸಿಕೊಳ್ಳಲು ಯತ್ನಿಸಿದ್ದು, ಹತಾಶರಾಗಿದ್ದಾರೆ. ಈ ವೇಳೆ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

37 ವರ್ಷದ ಅಶ್ರಫ್‌ ಖಲೀಲ್‌ ಶೇಖ್‌ ಮತ್ತವರ ಪತ್ನಿ ಹಮೀದಾ ಹಾಗೂ ಇಬ್ಬರು ಮಕ್ಕಳನ್ನು ಸ್ಥಳೀಯರು ಕೊಚ್ಚಿಹೋಗುತ್ತಿದ್ದ ಕಾರಿನಿಂದ ಆಶ್ಚರ್ಯಕರವಾಗಿ ರಕ್ಷಿಸಿ, ದಡ ಸೇರಿಸಿದ್ದಾರೆ.

ಭಾರಿ ಮಳೆಯಿಂದ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಸೇತುವೆ ಮೇಲೆ ಸಾಗುತ್ತಿದ್ದ ಮಧ್ಯಮಗಾತ್ರದ ಕಾರು ಜಾರಿ ನದಿಗೆ ಬಿದ್ದಿದೆ. ಇದೇ ವೇಳೆ ನೀರಿನಮಟ್ಟ ಮತ್ತಷ್ಟು ಹೆಚ್ಚಾಗಿದೆ. ನೀರಿನ ಸೆಳೆತಕ್ಕೆ ಕಾರು ಕೊಚ್ಚಿಹೋಗಲಾರಂಭಿಸಿದೆ. ಅದೃಷ್ಟವಶಾತ್‌ ನದಿಯಲ್ಲಿದ್ದ ಕಲ್ಲುಗಳಿಗೆ ಆತುಕೊಂಡು ಕಾರು ನಿಂತಿದೆ. ಇಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಸ್ಥಳೀಯರು ಕುಟುಂಬವನ್ನು ಸಂರಕ್ಷಿಸಿದ್ದಾರೆ.

miraculous-rescue-of-family-trapped-in-submerged-car-near-mumbai

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ