ಟಿಪ್ಪರ್ ಲಾರಿ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು

 

ಬೆಂಗಳೂರು, ಜು.13- ಹೋಂಡಾ ಆ್ಯಕ್ಟೀವಾ ಸ್ಕೂಟರ್‍ನಲ್ಲಿ ಹೋಗುತ್ತಿದ್ದ ಮಹಿಳೆಗೆ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಪೇಟೆ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕಾಟನ್‍ಪೇಟೆ ನಿವಾಸಿ ಕೆ.ಪದ್ಮ (46) ಮೃತಪಟ್ಟ ಮಹಿಳೆ.
ಇಂದು ಬೆಳಗ್ಗೆ 9.15ರ ಸಮಯದಲ್ಲಿ ಚಂದ್ರಾ ಲೇಔಟ್‍ನಲ್ಲಿರುವ ಚಾರ್ಟೆಡ್ ಅಕೌಂಟ್ ಆಫೀಸ್‍ಗೆ ಮನೆಯಿಂದ ತಮ್ಮ ಹೋಂಡಾ ಆ್ಯಕ್ಟೀವಾ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಬೆಂಗಳೂರು ಬಾಡಿ ಬಿಲ್ಡರ್ ಸಮೀಪ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಇವರ ಸ್ಕೂಟರ್‍ಗೆ ಡಿಕ್ಕಿ ಹೊಡೆದಿದೆ.
ಪರಿಣಾಮವಾಗಿ ಕೆಳಗೆ ಬಿದ್ದ ಪದ್ಮ ಗಂಭೀರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಚಿಕ್ಕಪೇಟೆ ಸಂಚಾರಿ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ