ಒಂದು ದೇಶ ಒಂದು ಚುನಾವಣೆ ಅಪಾಯಕಾರಿ ಆಲೋಚನೆ

 

ಬೆಂಗಳೂರು, ಜು.12- ಒಂದು ದೇಶ ಒಂದು ಚುನಾವಣೆ ಎಂಬ ಆಲೋಚನೆ ಪ್ರಜಾಪ್ರಭುತ್ವ ಮತ್ತು ರಾಜಕೀಯ ಉತ್ತರದಾಯಿತ್ವಕ್ಕೆ ವಿರುದ್ಧವಾದ ಆಲೋಚನೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ರಾಜ್ಯಸಭಾ ಸದಸ್ಯ ಜಯರಾಂ ರಮೇಶ್ ಆತಂಕ ವ್ಯಕ್ತಪಡಿಸಿದರು.
ನಗರದ ಟೌನ್‍ಹಾಲ್‍ನಲ್ಲಿ ಸಮಂಜಸ ಸಂಸ್ಥೆಯ ಉದ್ಘಾಟನೆ ವೇಳೆ ಏರ್ಪಡಿಸಲಾಗಿದ್ದ ಏಕ ಕಾಲದಲ್ಲಿ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆ ಸ್ಥಿತಿಗತಿ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, 1930 ರಲ್ಲಿ ಜರ್ಮನಿಯಲ್ಲಿ ಒಂದು ದೇಶ ಒಂದು ಸಂಸ್ಕøತಿ ಒಬ್ಬ ನಾಯಕ ಎಂಬ ಘೋಷಣೆ ಮಾಡಲಾಯಿತು. ಅದನ್ನು ಜನರ ಮೇಲೆ ಬಲವಂತವಾಗಿ ಹೇರಿದ್ದು, ಸರ್ವಾಧಿಕಾರಿ ಹಿಟ್ಲರ್. ಇತ್ತೀಚೆಗೆ ಭಾರತದಲ್ಲಿ ಒಂದು ದೇಶ ಒಂದು ತೆರಿಗೆ ಎಂಬ ಪದ್ಧತಿ ಜಾರಿಗೆ ಬಂದಿದೆ. ಅದರ ನಂತರ ಒಂದು ದೇಶ ಒಂದು ಚುನಾವಣೆ ಎಂಬ ಆಲೋಚನೆಯನ್ನು ಚರ್ಚೆಗೆ ಬಿಡಲಾಗಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಮುಂದಿನ ಹಂತದಲ್ಲಿ ಒಂದು ದೇಶ ಒಂದು ಚುನಾವಣೆ ಒಬ್ಬ ನಾಯಕ ಎಂಬಪ್ರಯೋಗಕ್ಕೆ ಮುನ್ನುಡಿ ಬರೆಯಲಾಗುತ್ತದೆ. ಭಾರತದಲ್ಲೂ ಸರ್ವಾಧಿಕಾರಿ ವ್ಯವಸ್ಥೆ ಜಾರಿಗೆ ತರುವ ಹುನ್ನಾರವಿದು ಎಂದು ಹೇಳಿದರು.
ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ವೈವಿದ್ಯತೆಯಲ್ಲಿ ಏಕತೆಗೆ ಸದಾ ವಿರುದ್ಧವಾಗಿದ್ದಾರೆ. ಅವರು ಒಂದು ದೇಶ ಒಂದು ಸಂಸ್ಕøತಿ ಬೇಕು ಒಬ್ಬ ದೇವರನ್ನು ಪೂಜಿಸಬೇಕು, ಒಂದೇ ರೀತಿಯ ಆಹಾರ ಸೇವಿಸಬೇಕು ಎಂಬ ನಿಲುವುಗಳನ್ನು ಪ್ರತಿಪಾದಿಸುತ್ತಾರೆ. ಇದು ಭಾರತದಂತಹ ದೇಶಗಳಿಗೆ ಮಾರಕವಾದ ಆಲೋಚನೆಗಳು ಎಂದು ತಿಳಿಸಿದರು.
ನಮ್ಮಲ್ಲಿ ಗಾಂಧೀಜಿ, ನೆಹರು, ಅಂಬೇಡ್ಕರ್, ರವೀಂದ್ರನಾಥ ಠಾಗೂರ್, ಸರ್ದಾರ್ ವಲಭಬಾಯಿ ಪಟೇಲ್ ಅವರುಗಳು ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದಾರೆ. ಅದರಂತೆ ನಮ್ಮದು ವೈವಿದ್ಯತೆಯಲ್ಲಿ ಏಕತೆಯ ದೇಶ. ನಮಗೆ ಒಗ್ಗಟ್ಟಿನ ಏಕತೆ ಅಗತ್ಯವೇ ಹೊರತು ಏಕರೂಪ ಸಂಸ್ಕøತಿ ಅಲ್ಲ. ಏಕ ರೂಪತೆಯ ಸಂಸ್ಕøತಿ ಆಲೋಚನೆಗಳು ಭಾರತದ ಪ್ರಜಾಭುತ್ವದ ವ್ಯವಸ್ಥೆಯನ್ನೇ ಅಲುಗಾಡಿಸುಬಿಡುತ್ತದೆ ಎಂದರು.
ಒಂದು ದೇಶ ಒಂದು ಚುನಾವಣೆ ಎಂಬ ಕಲ್ಪನೆ ಜಾರಿಯಾದರೆ, ಮೊದಲು ಸಂಸತ್ತು ಮತ್ತು ವಿಧಾನಸಭೆಗೆ ಏಕ ಕಾಲಕ್ಕೆ ಚುನಾವಣೆ ನಡೆಯುತ್ತದೆ. ನಂತರ ಸ್ಥಳೀಯ ಸಂಸ್ಥೆಗಳಿ ಚುನಾವಣೆ ಏರ್ಪಡುತ್ತದೆ. ಅಲ್ಲಿಗೆ ವೈವಿದ್ಯಮಯ ಪ್ರಜಾಪ್ರಭುತ್ವ ಮತ್ತು ಆಲೋಚನೆಗಳಿಗೆ ಕುಂದುಂಟಾಗುತ್ತದೆ. ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತ ನಡೆಸುತ್ತಿವೆ. ಮೊದಲು ಸಂಸತ್ ಮತ್ತು ವಿಧಾನಸಭೆಗೆ ಏಕ ಕಾಲಕ್ಕೆ ಚುನಾವಣೆ ನಡೆದರೆ ನಂತರ ಪಂಚಾಯ್ತಿಗೂ ಸಂಸತ್‍ಗೂ, ವಿಧಾನಸಭೆಗೆ ಒಮ್ಮೆಲೆ ಚುನಾವಣೆ ನಡೆಯುತ್ತದೆ. ಆಗ ಅಂತಹ ಸಂದರ್ಭ ಬಂದರೆ ಪ್ರಜಾಭುತ್ವದ ವೈವಿದ್ಯತೆಯೇ ಹಾಳಾಗುತ್ತದೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಹೇಳಿದರು.
ಸದ್ಯಕ್ಕೆ ಭಾರತದ ಚುನಾವಣೆಗೆ ದುಬಾರಿ ವೆಚ್ಚವಾಗುತ್ತಿರುವುದು ನಿಜ. ಅದನ್ನು ನಿಯಂತ್ರಿಸಲು ಎಲ್ಲಾ ರಾಜಕೀಯ ಪಕ್ಷಗಳು ಒಂದೆಡೆ ಕುಳಿತು ಸಂಘಟಾನಾತ್ಮಕ ನಿರ್ಧಾರ ತೆಗೆದುಕೊಳ್ಳಬೇಕು. ಚುನಾವಣೆಯ ಸಂಪೂರ್ಣ ಖರ್ಚನ್ನು ರಾಜ್ಯ ಸರ್ಕಾರವೇ ಭರಿಸುವ ವ್ಯವಸ್ಥೆ ಜಾರಿಗೆ ಬರಬೇಕು ಎಂಬ ಚಿಂತನೆ ಇದೆ. ಇದು ಒಳ್ಳೆಯ ಆಲೋಚನೆ. ಕೆಲವು ದೇಶಗಳಲ್ಲಿ ಅಭ್ಯರ್ಥಿಗಳ ಖರ್ಚಿನ ಜತೆಗೆ ರಾಜಕೀಯ ಪಕ್ಷಗ¼ಳಿಗೂ ಸರ್ಕಾರದ ಬೊಕ್ಕಸದಿಂದಲೇ ಹಣ ನೀಡಲಾಗುತ್ತದೆ. ಆಗ ಚುನಾವಣಾ ವೆಚ್ಚದ ಮೇಲೆ ನಿಯಂತ್ರಣ ಸಾಧ್ಯವಾಗುತ್ತದೆ. ಇಂತಹ ಪರ್ಯಾಯ ಕ್ರಮಗಳ ಬಗ್ಗೆ ಚಿಂತನೆ ಮಾಡುವ ಬದಲು ಸರ್ವಾಧಿಕಾರಿ ವ್ಯವಸ್ಥೆ ಬೆಳೆಸುವಂತಹ ಆಲೋಚನೆಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟು ಹಾಕುತ್ತಿರುವುದು ಸರಿಯಲ್ಲ ಎಂದರು.
ಈವರೆಗೂ ಜನಪರ ಕಾಳಜಿಯಿಂದ ವಿಮುಖರಾಗಿದ್ದ ಮೋದಿ ಅವರಿಗೆ ಇದಕ್ಕಿದ್ದಂತೆ ರೈತರು, ಮಹಿಳೆಯರು ಹಾಗೂ ಯುಕವರ ಮೇಲೆ ಕಾಳಜಿ ಹೆಚ್ಚಾಗುತ್ತಿದೆ. ಇಂತಹ ಕಣ್ಣೊರೆಸುವ ಆಟಗಳು ಕಾಲಕಾಲಕ್ಕೆ ನಡೆದು ಚುನಾವಣೆಯನ್ನು ಗೆಲ್ಲುವ ತಂತ್ರಗಾರಿಕೆಯನ್ನು ಮೋದಿ ಅನುಸರಿಸುತ್ತಿರುತ್ತಾರೆ ಎಂದು ಜಯರಾಂ ರಮೇಶ್ ಲೇವಡಿ ಮಾಡಿದರು,
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಹಿರಿಯ ಸ್ವತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ರಾಜ್ಯಸಭಾ ಸದಸ್ಯರಾದ ಕೆ.ಸಿ.ರಾಮಮೂರ್ತಿ, ಜೈನ್ ವಿಶ್ವವಿದ್ಯಾಲಯದ ಕುಲಪತಿ ಸಂದೀಪ್ ಶಾಸ್ತ್ರಿ, ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್‍ಕುಮಾರ್, ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷ ಪೆÇ್ರ.ರಾಧಾಕೃಷ್ಣ, ಸಮಂಜಸ ಸಂಸ್ಥೆ ಮುಖ್ಯಸ್ಥರಾದ ನಟರಾಜ್‍ಗೌಡ, ಮಂಜುನಾಥ್ ಅದ್ದೆ, ಎಸ್.ಎ.ಆಹಮದ್, ಸೂರ್ಯ ಮುಕುಂದರಾಜ್, ಅರುಣ್ ಮಲ್ನಾಡ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಭಿಕರೊಂದಿಗೆ ಜಯರಾಂ ರಮೇಶ್ ಸಂವಾದ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ