ಸಾವಿನ ಪ್ರಕರಣ ಭೇದಿಸಿದ ಪೆÇಲೀಸರು

ಕೊಳ್ಳೆಗಾಲ, ಜು.9-ಸ್ನೇಹಿತರೊಂದಿಗೆ ಹೊರಹೋಗಿದ್ದ ಯುವಕ ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಗ್ರಾಮಾಂತರ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಗ್ರಾಮದ ಉಪ್ಪಾರ ಜನಾಂಗದ ಹೊಸ ಬಡಾವಣೆಯಲ್ಲಿ ವಾಸವಾಗಿದ್ದ ಶಂಕರಶೆಟ್ಟಿ ಎಂಬುವವರ ಕಿರಿಯ ಮಗ ನಾಗರಾಜು (26) ವಿದ್ಯುತ್ ತಂತಿಗೆ ಸಿಲುಕಿ ಸಾವನ್ನಪ್ಪಿದ್ದನು. ಘಟನೆ ವಿವರ: ಜೂ.16 ರಂದು ಶಂಕರ ಶೆಟ್ಟಿ ಹಾಗೂ ರಾಜಮ್ಮ ದಂಪತಿ ಮಕ್ಕಳಾದ ನಾಗರಾಜು, ಸಹೋದರರಾದ ಮೂರ್ತಿ ಹಾಗೂ ಪ್ರಕಾಶ್ ಮೂವರು ವೃತ್ತಿಯಲ್ಲಿ ಟ್ರಾಕ್ಟರ್ ಚಾಲಕರಾಗಿದ್ದು, ಅಂದು ಬೆಳಿಗ್ಗೆ 8.30 ರಲ್ಲಿ ನಾಗರಾಜು ಎಂದಿನಂತೆ ಅಣ್ಣ ಪ್ರಕಾಶ ಬಾಡಿಗೆಗೆ ತಂದಿದ್ದ ಟ್ರಾಕ್ಟರನ್ನು ತೆಗೆದುಕೊಂಡು ಗ್ರಾಮದ ವಿಶಾಖ ಎಂಬುವವರ ಜಮೀನಿಗೆ ಉಳುಮೆ ಮಾಡಲು ಹೋಗಿದ್ದನು.
ಸಂಜೆ 6.30 ರಲ್ಲಿ ಮನೆಗೆ ನಾಗರಾಜು ವಾಪಸ್ಸಾಗಿದ್ದನು. ರಾತ್ರಿ 10 ಗಂಟೆಯ ಸಮಯದಲ್ಲಿ ಅದೇ ಗ್ರಾಮದಲ್ಲಿ ವಾಸವಿದ್ದ ದೊಡ್ಡಪ್ಪನ ಮಗ ನಿಂಗರಾಜು, ಮೊಂಡ ಹಾಗೂ ಚಂದ್ರ ಬುಲ್ಲಿ, ರಾಜು ಎಂಬುವವರು ಬಂದು ನಾಗರಾಜುವನ್ನು ಹೊರಗಡೆ ಹೋಗಿ ಬರುವಂತೆ ತಾವು ತಂದಿದ್ದ ಬೈಕ್‍ಗಳಲ್ಲಿ ಕರೆದುಕೊಂಡು ಹೋಗಿದ್ದರು. ಮಾರ್ಗ ಮಧ್ಯ ಶಿವಣ್ಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆ ರಕ್ಷಣೆಗೆ ಅಳವಡಿಸಿದ್ದ ವಿದ್ಯುತ್ ತಂತಿಗೆ ನಾಗರಾಜು ಸಿಲುಕಿ ಸಾವನ್ನಪ್ಪಿದ್ದನು. ನಂತರ ಕೊಳ್ಳೆಗಾಲ – ಮಲೆ ಮಹದೇಶ್ವರ ಬೆಟ್ಟ ರಸ್ತೆಯಿಂದ ರಾಜೂಗೌಡರ ಜಮೀನಿಗೆ ತೆರಳುವ ಚಾನಲï ರಸ್ತೆಯಲ್ಲಿ ಶವ ಬಿಸಾಡಿ ಜೂ.17ರಂದು ಬೆಳಗಿನ ಜಾವ 3.30 ರ ಸಮಯದಲ್ಲಿ ಮೃತನ ಸಹೋದರ ಪ್ರಕಾಶ್ ಮೊಬೈಲï ಗೆ ಕರೆ ಮಾಡಿ ನಿನ್ನ ತಮ್ಮನಿಗೆ ಹುಷಾರಿಲ್ಲ ಆಸ್ಪತ್ರೆಗೆ ಕರೆದು ಕೊಂಡು ಹೋಗ ಬೇಕು ಬಾ ಎಂದು ಕರೆದಿದ್ದಾನೆ. ಸ್ಥಳಕ್ಕೆ ಬಂದ ನಂತರ ಶವ ತೋರಿಸಿ ನಿನ್ನ ತಮ್ಮ ಸತ್ತು ಹೋಗಿದ್ದಾನೆ ಎಂದು ಹೇಳಿ ಪರಾರಿಯಾಗಿದ್ದರು.
ಈ ಸಂಬಂಧ ಮೃತನ ಸಹೋದರ ಪ್ರಕಾಶ್ ನೀಡಿದ್ದ ದೂರಿನ ಮೇರೆಗೆ ಕೊಳ್ಳೇಗಾಲ ಗ್ರಾಮಾಂತರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ