ಓಲಾಕ್ಯಾಬ್ ಚಾಲಕ ವಶಕ್ಕೆ

 

ಬೆಂಗಳೂರು, ಜು.5- ಓಲಾಕ್ಯಾಬ್ ಹತ್ತಿದ ಯುವತಿಯನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆದೊಯ್ಯುವ ಬದಲು ಮಾರ್ಗ ಬದಲಿಸಿದ ಚಾಲಕ ನನ್ನು ಚಿಕ್ಕಜಾಲ ಠಾಣೆ ಪೆÇಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಇಂದು ಮುಂಜಾನೆ 2 ಗಂಟೆ ಸಮಯದಲ್ಲಿ ಮುಂಬೈಗೆ ವಿಮಾನದಲ್ಲಿ ಹೋಗುವ ಸಲುವಾಗಿ ಯುವತಿಯೊಬ್ಬರು ಹೆಬ್ಬಾಳದಲ್ಲಿ ಓಲಾಕ್ಯಾಬ್ ಬುಕ್ ಮಾಡಿದ್ದರು.
ಅದರಂತೆ ಕ್ಯಾಬ್ ಬಂದಾಗ ಯುವತಿ ಹತ್ತಿಕೊಂಡಿದ್ದಾರೆ. ಕ್ಯಾಬ್ ವಿಮಾನ ನಿಲ್ದಾಣ ರಸ್ತೆಯ ಟೋಲ್ ಬಳಿ ಬರುತ್ತಿದ್ದಂತೆ ಚಾಲಕ ಕ್ಯಾಬ್‍ಅನ್ನು ಹೈದ್ರಾಬಾದ್ ರಸ್ತೆ ಕಡೆ ತಿರುಗಿಸಿಕೊಂಡಿದ್ದಾರೆ.
ತಕ್ಷಣ ಇದನ್ನು ಗಮನಿಸಿದ ಯುವತಿ ಚಾಲಕನನ್ನು ಪ್ರಶ್ನಿಸಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.
ಈ ವೇಳೆ ಗಾಬರಿಗೊಂಡ ಚಾಲಕ ಕ್ಯಾಬ್ ನಿಲ್ಲಿಸಿದ್ದಾನೆ. ತಕ್ಷಣ ಯುವತಿ ಚಿಕ್ಕಜಾಲ ಪೆÇಲೀಸರಿಗೆ ದೂರು ನೀಡಿದ್ದಾರೆ.
ಪೆÇಲೀಸರು ತಕ್ಷಣ ಸ್ಪಂದಿಸಿ ಕ್ಯಾಬ್ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ