ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಆನಂದವಾಗಲಿ – ರಾಜ್‍ಕುಮಾರ್ ಪಾಟೀಲ್

 

ಬೆಂಗಳೂರು, ಜು.4- ಹೈದರಾಬಾದ್ ಕರ್ನಾಟಕ ಪ್ರದೇಶಕ್ಕೆ ಬಜೆಟ್‍ನಲ್ಲಿ ಕಲ್ಯಾಣ ಕರ್ನಾಟಕ ಎಂಬ ಹೆಸರಿಡಬೇಕೆಂದು ಬಿಜೆಪಿ ಶಾಸಕ ರಾಜ್‍ಕುಮಾರ್ ಪಾಟೀಲ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾರ್ಪಣಾ ಪ್ರಸ್ತಾವ ಕುರಿತು ಮಾತನಾಡಿದ ಅವರು, ಹೈದರಾಬಾದ್ ಕರ್ನಾಟಕ ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೊಂದಿದೆ. ಹೈದರಾಬಾದ್ ಕರ್ನಾಟಕ ಎಂಬುದು ದಾಸ್ಯದ ಸಂಖೇತ. ಅದಕ್ಕೆ ಬದಲಾಗಿ ಕಲ್ಯಾಣ ಕರ್ನಾಟಕ ಎಂಬ ಹೆಸರಿಟ್ಟರೆ. ಆ ಭಾಗದ ಜನರಿಗೆ ಆನಂದವಾಗಲಿದೆ ಎಂದು ಹೇಳಿದರು.

ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ 25 ಲಕ್ಷದಿಂದ 60 ಲಕ್ಷ ರೂ.ವರೆಗೂ ಶುಲ್ಕ ನಿಗದಿ ಮಾಡಿದ್ದು, ಸಾಮಾನ್ಯ ಜನರ ಕೈಗೆಟಕುತ್ತಿಲ್ಲ. ಮೆಡಿಕಲ್ ಕಾಲೇಜುಗಳ ಮೇಲೆ ನಿಯಂತ್ರಣ ಬೇಕು. ಪ್ರತಿ ಕಾಲೇಜಿಗೂ ಪ್ರತ್ಯೇಕ ಶುಲ್ಕವಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು ಎಂದರು.
ಮಧ್ಯ ಪ್ರವೇಶಿಸಿದ ಬಿಜೆಪಿ ಶಾಸಕ ಡಾ.ಅಶ್ವತ್ಥನಾರಾಯಣ ಅವರು, ಮೆಡಿಕಲ್ ಸೀಟುಗಳನ್ನು ಮೆರಿಟ್ ಆಧಾರದ ಮೇಲೆ ಪಡೆದು ಕೊನೆಯ ಗಳಿಗೆಯಲ್ಲಿ ಲ್ಯಾಪ್ಸ್ ಮಾಡಲಾಗುತ್ತದೆ. ಅದು ಖಾಸಗಿ ಆಡಳಿತ ಮಂಡಳಿಗೆ ಆ ಸೀಟು ಲಭ್ಯವಾಗುತ್ತದೆ. ಲ್ಯಾಪ್ಸ್ ಮಾಡಿದ್ದಕ್ಕೆ ಕಡಿಮೆ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ಲ್ಯಾಪ್ಸ್ ಮಾಡದ ಸೀಟುಗಳನ್ನು ಮಧ್ಯವರ್ತಿಗಳು, ಏಜೆನ್ಸಿ ಸೇರಿ ಮಾರಾಟ ಮಾಡುತ್ತಾರೆ. ಇದೊಂದು ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಯುತ್ತದೆ ಎಂದು ರಾಜ್‍ಕುಮಾರ್ ಮಾಡಿದ ಆರೋಪಕ್ಕೆ ದನಿಗೂಡಿಸಿದರು.

ವಿಧಾನಸೌಧ ಬೆಂಗಳೂರಿನಲ್ಲೂ ಉದ್ಯೋಗ ನೀಡಿ:
ಸಂವಿಧಾನದ ವಿಧಿ 321ಜೆ ಅಡಿಯಲ್ಲಿ ಕೇವಲ ಕಸ ಗುಡಿಸೋರು, ಚರಂಡಿ ತೋಳೆಯೋ ಹುದ್ದೆ ನೀಡಿದರೆ ಸಾಲದು, ವಿಧಾನಸೌಧ ಸೇರಿದಂತೆ ಬೆಂಗಳೂರಿನ ವಿವಿಧ ಇಲಾಖೆಗಳಲ್ಲಿ ಉದ್ಯೋಗ ನೀಡಬೇಕು. ಆಗ ಸಮಾನತೆ ಬರುತ್ತದೆ. ಬೆಂಗಳೂರು ನೋಡದ ಹೈದರಾಬಾದ್ ಮತ್ತು ಮುಂಬೈ ಕರ್ನಾಟಕದವರಿಗೂ ಬೆಂಗಳೂರು ತೋರಿಸುವಂತಹ ಕೆಲಸ ಮಾಡಿದಾಗ ಆಡಳಿತದಲ್ಲಿ ಸಮಪಾಲು ತೋರಿಸಿದಂತಾಗುತ್ತದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ