ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಜಯಮಾಲಾ ಅವರನ್ನು ವಿಧಾನಪರಿಷತ್ತಿನ ಸಭಾನಾಯಕರಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಣೆ

 

ಬೆಂಗಳೂರು, ಜು.2-ಕನ್ನಡ ಮತ್ತು ಸಂಸ್ಕøತಿ ಸಚಿವರಾದ ಜಯಮಾಲಾ ಅವರನ್ನು ವಿಧಾನಪರಿಷತ್ತಿನ ಸಭಾನಾಯಕರಾಗಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಘೋಷಣೆ ಮಾಡಿದರು.
ಮೇಲ್ಮನೆ ಕಲಾಪ ಆರಂಭದಲ್ಲಿ ಸಭಾಪತಿ ಅವರು ಜಯಮಾಲಾ ಅವರನ್ನು ವಿಧಾನಪರಿಷತ್‍ನ ಸಭಾನಾಯಕರಾಗಿ ಹಾಗೂ ವಿಪಕ್ಷದ ಸಚೇತಕರಾಗಿ ಮಹಂತೇಶ ಕವಟಗಿ ಮಠ್ ಅವರ ನೇಮಕವನ್ನು ಪ್ರಕಟಿಸಿದರು.
ವಿಧಾನಪರಿಷತ್ತಿಗೆ ಹಿರಿಯ ಸದಸ್ಯರನ್ನು ಸಭಾನಾಯಕರನ್ನಾಗಿ ನೇಮಕ ಮಾಡಬೇಕೆಂದು ಹಲವು ಕಾಂಗ್ರೆಸ್‍ನ ಹಿರಿಯ ಸದಸ್ಯರು ಪಟ್ಟು ಹಿಡಿದಿದ್ದರು.
ಸದನದಿಂದ ಸಚಿವರಾದವರು ಸಭಾನಾಯಕರಾಗುವುದು ಸದನದ ಸಂಪ್ರದಾಯ. ಈ ಹಿಂದೆ ಎಸ್.ಆರ್.ಪಾಟೀಲ್, ಡಾ.ಜಿ.ಪರಮೇಶ್ವರ್ ಅವರು ಸಭಾನಾಯಕರ ಸ್ಥಾನವನ್ನು ನಿರ್ವಹಿಸಿದ್ದರು. ಇವರು ಹಿರಿಯ ಸದಸ್ಯರಾಗಿದ್ದರು. ಇವರ ವಿರುದ್ಧ ಯಾವ ಆಕ್ಷೇಪವೂ ಕೇಳಿ ಬಂದಿರಲಿಲ್ಲ.
ಆದರೆ ಜಯಮಾಲಾ ಅವರು ಪ್ರಥಮ ಬಾರಿಗೆ ಸದಸ್ಯರಾಗಿದ್ದಾರೆ. ಪ್ರಥಮ ಬಾರಿ ಸಚಿವರಾಗಿರುವ ಅವರಿಗೆ ಸಭಾನಾಯಕಿ ಹುದ್ದೆ ನೀಡುವುದು ಬೇಡ, ಸದನದ ಹಿರಿಯ ಸದಸ್ಯರೊಬ್ಬರಿಗೆ ಸಚಿವ ಸ್ಥಾನ ನೀಡಿ ಅವರನ್ನು ಸಭಾನಾಯಕರನ್ನಾಗಿ ಮಾಡಬೇಕೆಂದು ಕಾಂಗ್ರೆಸ್‍ನ ಹಲವು ಹಿರಿಯ ಸದಸ್ಯರು ಪಕ್ಷದ ಅಧ್ಯಕ್ಷರಿಗೆ, ಸಮನ್ವಯ ಸಮಿತಿ ಅಧ್ಯಕ್ಷರಿಗೆ ಹಾಗೂ ಪಕ್ಷದ ಉಸ್ತುವಾರಿಗೆ ಮನವಿ ಮಾಡಿದರು.
ಈ ಎಲ್ಲಾ ಆಕ್ಷೇಪಗಳ ನಡುವೆಯೇ ಸಂಪುಟದಲ್ಲಿ ಸ್ಥಾನ ಪಡೆದ ಏಕೈಕ ಮಹಿಳಾ ಸದಸ್ಯರಾಗಿರುವ ಜಯಮಾಲಾ ಅವರನ್ನು ಸಭಾನಾಯಕರನ್ನಾಗಿ ನೇಮಕ ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ