ಅಮೆರಿಕದ ವಲಸೆ ನೀತಿ ವಿರೋಧಿಸಿ ಬೃಹತ್ ಪ್ರತಿಭಟನೆ

ವಾಷಿಂಗ್ಟನ್, ಜು.1- ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ ತಾಯಿ ಮತ್ತು ಮಕ್ಕಳನ್ನು ಬೇರ್ಪಡಿಸುವ ಅಮೆರಿಕದ ವಲಸೆ ನೀತಿ ವಿರೋಧಿಸಿ ಇಂದು ಭಾರತೀಯರು ಸೇರಿದಂತೆ ಇಂದು ಸಾವಿರಾರು ಮಂದಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುವ ಮೂಲಕ ಟ್ರಂಪ್ ಆಡಳಿತಕ್ಕೆ ಎಚ್ಚರಿಕೆ ನೀಡಿದರು.
ವೈಟ್‍ಹೌಸ್ ಮುಂಭಾಗ ಪ್ರತಿಭಟನೆ ನಡೆಸಿದ ವಿದೇಶಿಯರು ತಾಯಿ – ಮಕ್ಕಳನ್ನು ಬೇರ್ಪಡಿಸುವಂತಹ ಹೀನ ವಲಸೆ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಶೂನ್ಯ ತಡೆಗಟ್ಟುವಿಕೆ ನೀತಿಯಡಿ ದೇಶದ ಗಡಿ ಭಾಗದಲ್ಲಿ 2000ಕ್ಕೂ ಹೆಚ್ಚು ಅಕ್ರಮ ವಲಸಿಗರನ್ನು ವಶಕ್ಕೆ ಪಡೆದ ಟ್ರಂಪ್ ಆಡಳಿತ ಪೆÇೀಷಕರು ಮತ್ತು ಮಕ್ಕಳನ್ನು ಬೇರ್ಪಡಿಸುವ ಮೂಲಕ ವಿಶ್ವದ ಕೆಂಗಣ್ಣಿಗೆ ಗುರಿಯಾಗಿತ್ತು. ವೈಟ್‍ಹೌಸ್ ಮುಂಭಾಗ ಭಾರತೀಯರು ಮತ್ತು ವಿದೇಶಿಯರು ಬೃಹತ್ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಅಮೆರಿಕದ ವಿವಿಧ ನಗರಗಳಲ್ಲಿ ಡೆಮಾಕ್ರೆಟಿಕ್ ಪಕ್ಷದ ಮುಖಂಡರುಗಳು , ಮಾನವ ಹಕ್ಕುಗಳ ಹೋರಾಟಗಾರರು ಮತ್ತು ವಿವಿಧ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನಾ ಮೆರವಣಿಗೆ ನಡೆಸಿ ಟ್ರಂಪ್ ಆಡಳಿತ ವಿರುದ್ಧ ಕಿಡಿಕಾರಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ