ಕಂದಕಕ್ಕೆ ಉರುಳಿದ ಬಸ್: 35 ಮಂದಿ ದಾರುಣ ಸಾವು

ಉತ್ತರಾಖಂಡ್:ಜು-1: ಬಸ್ ವೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 35 ಮಂದಿ ಸಾವನ್ನಪ್ಪಿ, ಹಲವರಿಗೆ ಗಾಯವಾಗಿರುವ ಘಟನೆ ಉತ್ತರಾಖಂಡ್’ನ ಪೌರಿ ಗರ್ಹ್ವಾಲ್ ಜಿಲ್ಲೆಯಲ್ಲಿ ಸಂಭವಿಸಿದೆ.

ಪೌರಿ ಗರ್ಹ್ವಾಲ್ ಜಿಲ್ಲೆಯ ನೈನಿದಂದ ಬ್ಲಾಕ್ ಬಳಿಯಿರುವ ಪಿಪಾಲಿ-ಭೂವಾನ್ ಮೊಟಾರ್’ವೇ ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಭೂವಾನ್ ನಿಂದ ರಾಮನಗರಕ್ಕೆ 45 ಮಂದಿ ಪ್ರಯಾಣಿಕರನ್ನು ಮಿನಿ ಬಸ್ ವೊಂದು ಹೊತ್ತೊಯ್ಯುತ್ತಿತ್ತು. ನೈನಿದಂದ ಬ್ಲಾಕ್ ಬಳಿ ಬರುತ್ತಿದ್ದಂತೆಯೇ ಬಸ್ 60 ಅಡಿ ಆಳವಿರುವ ಕಂದಕಕ್ಕೆ ಉರುಳಿ ಬಿದ್ದಿದೆ. ಪರಿಣಾಮ ಬಸ್ ನಲ್ಲಿದ್ದ 35 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

10 ಮಂದಿಯ ಪೈಕಿ 4 ಮಂದಿ ಸ್ಥಿತಿ ಗಂಭೀರವಾಗಿದ್ದು, ಸ್ಥಳಕ್ಕಾಗಮಿಸಿರುವ ಎನ್’ಡಿಆರ್’ಎಫ್ ಪಡೆ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದೆ.

35 Killed In Bus Accident,Uttarakhand’s Pauri Garhwal District

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ