ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಬಂಧನ

A little girl poses for photographs to illustrate the topic of child abuse in Canberra, Monday, Oct. 28, 2013. (AAP Image/Lukas Coch) NO ARCHIVING

ಮೈಸೂರು,ಜೂ.30- ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಯುವಕನನ್ನು ನಗರದ ಉದಯಗರಿ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ನಗರದ ಗಾಯತ್ರಿಪುರಂ ವಾಸಿ ಹೇಮಂತಕುಮಾರ್(20) ಬಂಧಿತ ಆರೋಪಿ. ಕಳೆದ ಎರಡು ದಿನಗಳ ಹಿಂದೆ ಬಾಲಕಿ ಕಾಣೆಯಾಗಿದ್ದಾಳೆ ಎಂದು ಉದಯಗಿರಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಹೇಮಂತ್‍ಕುಮಾರ್ ಬಾಲಕಿಯನ್ನು ಕರೆದ್ಯೂದಿರುವುದು ಗೊತ್ತಾಗಿದೆ. ತಕ್ಷಣ ಆತನನ್ನು ಹಿಡಿದು ಬಾಲಕಿಯನ್ನು ರಕ್ಷಿಸಿ ಪೆÇೀಷಕರಿಗೆ ಒಪ್ಪಿಸಲಾಗಿದೆ. ಬಾಲಕಿ ಮೇಲೆ ಹೇಮಂತ್ ಕುಮಾರ್ ಅತ್ಯಾಚಾರಕ್ಕೆ ಯತ್ನಿಸಿದ್ದನೆಂದು ತಿಳಿದು ಆತನನ್ನು ಪೆÇಕ್ಸೊ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ