ಮುಕ್ತ ವಿವಿ ಅಕ್ರಮ-ಆರೋಪಗಳ ಬಗ್ಗೆ ಚರ್ಚೆಗೆ ಸಿದ್ದ- ಪೆÇ್ರ.ಕೆ.ಎಸ್.ರಂಗಪ್ಪ

ಮೈಸೂರು, ಜೂ.23- ಕರ್ನಾಟಕ ರಾಜ್ಯ ಮುಕ್ತ ವಿಶ್ವದ್ಯಾಲಯಕ್ಕೆ ಸಂಬಂಧಿಸಿದ ಅಕ್ರಮ-ಆರೋಪಗಳ ಬಗೆಗಿನ ಬಹಿರಂಗ ಚರ್ಚೆಗೆ ತಾವು ಸಿದ್ಧ ಎಂದು ವಿಶ್ರಾಂತ ಕುಲಪತಿ ಹಾಗೂ ಜೆಡಿಎಸ್ ಮುಖಂಡ ಪೆÇ್ರ.ಕೆ.ಎಸ್.ರಂಗಪ್ಪ ಪಂಥಾಹ್ವಾನ ನೀಡಿದ್ದಾರೆ.
ಇತ್ತೀಚೆಗೆ ಬಿಜೆಪಿಯ ಗೋ.ಮಧುಸೂದನ್ ಅವರು ಅಕ್ರಮ ಆರೋಪಗಳ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದರು. ಈ ಸವಾಲನ್ನು ಸ್ವೀಕರಿಸಿರುವ ರಂಗಪ್ಪನವರು ದಿನಾಂಕ, ಸ್ಥಳ ಹಾಗೂ ಸಮಯವನ್ನು ನಿಗದಿಪಡಿಸಿದರೆ ತಾವು ಬರಲು ಸಿದ್ಧ ಎಂದು ಮರು ಸವಾಲು ಹಾಕಿದ್ದಾರೆ. ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ರಂಗಪ್ಪನವರು ಗೋ.ಮಧುಸೂದನ್ ಅವರು ಮುಕ್ತ ವಿವಿಯಲ್ಲಿ ಅವ್ಯವಹಾರಗಳು ನಡೆದಿದ್ದು, ಈ ಬಗ್ಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಾರೆ. ಹಾಗಾಗಿ ನಾನೂ ಕೂಡ ಅವರಿಗೆ ಆಹ್ವಾನ ನೀಡಿದ್ದೇನೆ ಎಂದರು. ಒಂದು ವಾರ ಕಾಲಾವಕಾಶ ನೀಡಿ ಸ್ಥಳ, ದಿನಾಂಕ, ಸಮಯ ನಿಗದಿಪಡಿಸುವಂತೆ ಗೋ.ಮಧುಸೂದನ್ ಅವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ