ವಿದ್ಯಾರ್ಥಿನಿಯ ಮೊಬೈಲ್ ಕಸಿದು ಪಾರಾರಿ

ಚನ್ನಪಟ್ಟಣ, ಜೂ.30- ಕಳ್ಳನೊಬ್ಬ ಕಾಲೇಜು ವಿದ್ಯಾರ್ಥಿನಿ ಕೈಯಿಂದ ಬೆಲೆ ಬಾಳುವ ಮೊಬೈಲ್ ಕಸಿದು ಪಾರಾರಿಯಾಗಿರುವ ಘಟನೆ ನಗರದ ಪೆÇಲೀಸ್ ಠಾಣೆ ವ್ಯಾಪ್ತಿಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿನಿ ಶಕೀಲಾ ಎಂದು ತಿಳಿದು ಬಂದಿದ್ದು, ಬೆಂಗಳೂರಿನ ಕಾಲೇಜಿಗೆ ತೆರಳಲು ನಿಲ್ದಾಣದಲ್ಲಿ ಬರುವಾಗ ಈ ಘಟನೆ
ಸಂಭವಿಸಿದೆ. ಸುಮಾರು 30 ಸಾವಿರ ಮೌಲ್ಯದ ಮೊಬೈಲ್ ಅಪಹರಣವಾಗಿದ್ದು, ಕಾಲೇಜು ವಿದ್ಯಾರ್ಥಿ ಸೋಗಿನಲ್ಲಿದ್ದ ಆತ ಹಿಂಬದಿಯಿಂದ ಬಂದು ಮೊಬೈಲ್ ಕಿತ್ತುಕೊಂಡು ಪರಾರಿಯಾದನೆಂದು ಹೇಳಲಾಗಿದೆ.
ನೂರಾರು ಪ್ರಯಾಣಿಕರು ತಿರುಗಾಡುವ ನಿಲ್ದಾಣದಲ್ಲಿ ಏಕಾಏಕಿ ಮೊಬೈಲ್ ಕಸಿದು ಪರಾರಿಯಾದ ಘಟನೆುಂದ ಭಯಭೀತಳಾದ ವಿದ್ಯಾರ್ಥಿನಿ ತನ್ನ ತಂದೆಗೆ ಕರೆಮಾಡಿ ಕರೆಸಿಕೊಂಡಿದ್ದಾಳೆ. ಠಾಣೆಗೆ ದೂರು ನೀಡಿದರೂ ಪ್ರಯೋಜನವಾಗದು ಎಂದುಕೊಂಡು ದೂರು ನೀಡಿಲ್ಲ ಎಂದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ