ನಿಂತಿದ್ದ ಕಾರಿಗೆ ಬೆಂಕಿ

 

ಬೆಂಗಳೂರು, ಜೂ.30-ರಸ್ತೆ ಬದಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡು ಭಾಗಶಃ ಹಾನಿಯಾಗಿದೆ.
ಮಹದೇವಪುರ ಪೆÇಲೀಸ್ ಠಾಣೆ ವ್ಯಾಪ್ತಿಯ ಗ್ರಾಫೈಟ್ ಇಂಡಿಯಾ ರಸತೆಯ ಹೂಡಿ ಸರ್ಕಲ್ ಸಮೀಪ ರಸ್ತೆ ಬದಿ ಸಂಜೆ ಕಾರು ನಿಲ್ಲಿಸಲಾಗಿತ್ತು.
ರಾತ್ರಿ 7.35ರ ಸುಮಾರಿನಲ್ಲಿ ಈ ಕಾರು ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕಕ್ಕೆ ತಿಳಿಸಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿಯನ್ನು ನಂದಿಸಿದರಾದರೂ ಕಾರು ಭಾಗಶಃ ಸುಟ್ಟು ಹೋಗಿತ್ತು.
ಕಾರಿನಲ್ಲಿ ಶಾರ್ಟ್‍ಸಕ್ರ್ಯೂಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಮಹದೇವಪುರ ಠಾಣೆ ಪೆÇಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ