2030-31ರ ವೇಳೆಗೆ ಭಾರತದ ಉಕ್ಕು ಉತ್ಪಾದನೆ ಸಾಮಥ್ರ್ಯ 300 ಮೆಟ್ರಿಕ್ ಟನ್‍ಗಳಿಗೆ ಹೆಚ್ಚಳ

 

ಬೆಂಗಳೂರು, ಜೂ.29-ಭಾರತವು ಉಕ್ಕು ಉತ್ಪಾದನೆಯಲ್ಲಿ ಜಾಗತಿಕ ಮಾನ್ಯತೆ ಗಳಿಸುತ್ತಿದ್ದು, 2030-31ರ ವೇಳೆಗೆ ಉಕ್ಕು ಉತ್ಪಾದನೆ ಸಾಮಥ್ರ್ಯವನ್ನು 300 ಮೆಟ್ರಿಕ್ ಟನ್‍ಗಳಿಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದು ಕೇಂದ್ರ ಉಕ್ಕು ಖಾತೆ ಸಚಿವ ಚೌಧರಿ ಬೀರೇಂದ್ರಸಿಂಗ್ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ನಡೆದ ರಾಷ್ಟ್ರೀಯ ಉಕ್ಕು ಬಳಕೆದಾರರ ಮಂಡಳಿಯ ಸಭೆಯಲ್ಲಿ ಮಾತನಾಡಿದ ಸಚಿವರು, ಭಾರತವು ಪ್ರಸ್ತುತ ಉಕ್ಕು ಉತ್ಪಾದನೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು 12 ವರ್ಷಗಳಲ್ಲಿ ಉತ್ಪಾದನೆಯನ್ನು ಮತ್ತಷ್ಟು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಉಕ್ಕು ಸಚಿವಾಲಯದ ಎಂ-3(ಎಂಎಸ್‍ಟಿಸಿ) ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದರು.
ಈ ಮೊಬೈಲ್‍ನಿಂದ ಗ್ರಾಹಕರು ಉತ್ಪಾದಕರು ಮತ್ತು ಮಾರಾಟಗಾರರ ನಡುವೆ ಸಂಪರ್ಕ ಕಲ್ಪಿಸಲು ಸಹಕಾರಿಯಾಗಲಿದೆ. ಅಲ್ಲದೆ ಕೇಂದ್ರ ಸರ್ಕಾರದ ಡಿಜಿಟಲ್ ಇಂಡಿಯಾ ಉಪಕ್ರಮವನ್ನು ಸಾಕಾರಗೊಳಿಸಲು ಇದು ನೆರವಾಗಲಿದೆ ಎಂದು ಸಚಿವರು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ