ಅಹಿಂದ ನಾಯಕರಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

 

ಬೆಂಗಳೂರು, ಜೂ.27-ಧರ್ಮಸ್ಥಳದಲ್ಲಿ ಪ್ರಕೃತಿ ಚಿಕಿತ್ಸೆ ಪqಯುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಹಿಂದ ನಾಯಕರು ಭೇಟಿ ಮಾಡಿದ್ದು, ಅವರು ಹಿಂದಿರುಗುವ ಮುನ್ನವೇ ಬಲಾಬಲ ಪ್ರದರ್ಶನದ ವೇದಿಕೆ ಸಜ್ಜಾಗಿದೆ ಎನ್ನಲಾಗುತ್ತಿದೆ.
ಕಳೆದ 12 ದಿನಗಳಿಂದ ಚಿಕಿತ್ಸೆಗಾಗಿ ಧರ್ಮಸ್ಥಳದಲ್ಲಿರುವ ಸಿದ್ದರಾಮಯ್ಯ ಅವರನ್ನು ಇಂದು ಅಹಿಂದಾದ ಕೆಲ ಮುಖಂಡರು ಭೇಟಿ ಮಾಡಿ ಚರ್ಚಿಸಿದ್ದಾರೆ. ಇದು ಮೈತ್ರಿ ಸರ್ಕಾರದಲ್ಲಿ ಪದೇ ಪದೇ ಹೇಳಿಕೆ ನೀಡುತ್ತಿದ್ದ ಸಿದ್ದರಾಮಯ್ಯ ಅವರು ಪ್ರತ್ಯೇಕತೆ ಕಾಯ್ದುಕೊಂಡ ಹಿನ್ನೆ¯ಯಲ್ಲಿ ಹೊಸ ರಾಜಕೀಯ ನಡೆಗೂ ಕಾರಣವಿರಬಹುದು ಎಂಬುದನ್ನು ಹೇಳುವಂತಿದೆ.

ಅಹಿಂದ ನಾಯಕರೊಂದಿಗೆ ಪ್ರತ್ಯೇಕ ಸಭೆ ನಡೆಸಿದ ಸಿದ್ದರಾಮಯ್ಯ ಅವರ ಈ ನಡೆ ಕುತೂಹಲ ಮೂಡಿಸಿದ್ದು, ಕೆಲ ಕಾಲದಿಂದ ಇವರಿಂದ ದೂರವಿದ್ದ ಮಾಜಿ ಸಚಿವ ಎಚ್.ಆಂಜನೇಯ ಇಂದು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.

ಅದಲ್ಲದೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವವರ ಸಂಖ್ಯೆಯೂ ದಿನೇ ದಿನೇ ಹೆಚ್ಚುತ್ತಿದೆ. ಇದಕ್ಕೆ ಪೂರಕವೆಂಬಂತೆ ಭಾರೀ ಮಳೆ ರಸ್ತೆ ಸಂಚಾರವೇ ದುಸ್ತರ ಎನ್ನುವ ಸಂದರ್ಭದಲ್ಲೂ ಬೆಳ್ತಂಗಡಿ ಮೂಲಕ ಪ್ರಯಾಸಪಟ್ಟು ಸಚಿವ ರಮೇಶ್ ಜಾರಕಿ ಹೊಳೆ ನೇತೃತ್ವದಲ್ಲಿ 9 ಮಂದಿ ಶಾಸಕರು ಧರ್ಮಸ್ಥಳಕ್ಕೆ ಆಗಮಿಸಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ಈ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿರುವುದು ಸಾಕಷ್ಟು ಕುತೂಹಲ ಕೆರಳಿಸಿದೆ.
ನಾಳೆ ನಗರಕ್ಕೆ ಸಿದ್ದರಾಮಯ್ಯ ಆಗಮಿಸುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿರುವುದು ರಾಜ್ಯ ರಾಜಕೀಯದ ಬಗ್ಗೆಯೂ ಕುತೂಹಲಕ್ಕೆ ಕಾರಣವಾಗಿದ್ದು, ಇಂದು ರಮೇಶ್ ಜಾರಕಿ ಹೊಳಿ ಅವರೊಂದಿಗೆ ಶಾಸಕರಾದ ಮಹೇಶ್ ಕಮಟಳ್ಳಿ, ಬಸವಕಲ್ಯಾಣದ ಜಿ.ನಾರಾಯಣ್, ಬಳ್ಳಾರಿಯ ನಾಗೇಂದ್ರ, ರಾಯಚೂರಿನ ಬಿ.ವಿ.ನಾಯಕ್, ವಿವೇಕರಾವ್ ಪಾಟೀಲ್, ಬಸವನಗೌಡ ಗದ್ದಲ್, ಪ್ರತಾಪ್‍ಗೌಡ ಪಾಟೀಲ್ ಮತ್ತಿತರರು ಭೇಟಿ ಮಾಡಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ