ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮಹಿಳೆ ಸಾವು

Execution Sling Hanging Hangman Knot Penalty Rope

ಮೈಸೂರು, ಜೂ.26-ಬ್ಯೂಟಿಷಿಯನ್ ಆಗಿದ್ದ ಮಹಿಳೆಯೊಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಆಲನಹಳ್ಳಿ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ದಾಮೋದರ ಬಡಾವಣೆಯ ನಿವಾಸಿ ರಮ್ಯಾ (25) ಮೃತಪಟ್ಟಿರುವ ಮಹಿಳೆ. ಮೂಲತಃ ಚನ್ನರಾಯಪಟ್ಟಣದ ಜನಿವಾರ ಗ್ರಾಮದ ನಿವಾಸಿಯಾದ ರಮ್ಯಾ, ಆರು ವರ್ಷಗಳ ಹಿಂದೆ ಆನಂದ್ ಎಂಬುವರನ್ನು ಮದುವೆಯಾಗಿದ್ದು, ಇವರಿಬ್ಬರ ಮಧ್ಯೆ ವೈಮನಸ್ಯ ಉಂಟಾಗಿ ಕಳೆದೆರಡು ವರ್ಷಗಳಿಂದ ಆನಂದ್‍ನಿಂದ ದೂರವಾಗಿದ್ದರು. ನಗರದ ಪ್ರತಿಷ್ಠಿತ ಖಾಸಗಿ ಹೊಟೇಲ್‍ನಲ್ಲಿ ಬ್ಯೂಟಿಷಿಯನ್ ಆಗಿದ್ದ ರಮ್ಯಾ ಇತ್ತೀಚೆಗೆ ಸುನೀಲ್ ಎಂಬಾತನ ಜೊತೆಯಲ್ಲಿದ್ದರು ಎನ್ನಲಾಗಿದೆ. ತಡರಾತ್ರಿ ನೇಣುಬಿಗಿದ ಸ್ಥಿತಿಯಲ್ಲಿ ರಮ್ಯಾ ಶವ ಪತ್ತೆಯಾಗಿದ್ದು, ಸುನೀಲ್‍ನೇ ಆಕೆಯನ್ನು ಕೊಲೆ ಮಾಡಿದ್ದಾನೆಂದು ಮಹಿಳೆಯ ಪೆÇೀಷಕರು ಆಲನಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ