ಅಮರನಾಥ ಯಾತ್ರೆಗೆ ಬೈಕ್​ ಸ್ಕ್ವಾಡ್​ ಭದ್ರತೆ: ಯಾತ್ರಿಗಳ ಸುರಕ್ಷತೆಗೆ ಏಳು ಸುತ್ತಿನ ಕೋಟೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಎಂದಿನಂತೆ ಅಮರನಾಥ ಯಾತ್ರೆಗೆ ಉಗ್ರ ಬೆದರಿಕೆ ಹಿನ್ನೆಲೆಯಲ್ಲಿ ಈ ಬಾರಿ ಸೇನೆ ಯಾತ್ರಿಕರಿಗೆ ಬಿಗಿ ಭದ್ರತೆ ಒದಗಿಸಲು ನಿರ್ಧರಿಸಿದೆ. ಈ ಸಲದ ಅಮರನಾಥ ಯಾತ್ರೆ ಜೂನ್‌ 28ರಿಂದ ಪ್ರಾರಂಭವಾಗಲಿದೆ.
ವಿಶೇಷ ಎಂದರೆ ಈ ಬಾರಿ ಅಮರನಾಥ ಯಾತ್ರಿಕರ ಭದ್ರತೆಗಾಗಿ ಸಿಆರ್‌ಪಿಎಫ್​ನ ವಿಶೇಷ ಮೋಟಾರ್‌ ಬೈಕ್‌ ದಳವನ್ನು ಆಯೋಜನೆ ಮಾಡಲಾಗಿದೆ. ಅಮರನಾಥ ಯಾತ್ರಿಕರು ಪ್ರಯಾಣಿಸುವ ಎಲ್ಲ ವಾಹನಗಳನ್ನು ರೇಡಿಯೋ ಫ್ರೀಕ್ವೆನ್ಸಿ (RF) ಟ್ಯಾಗ್‌ ಮೂಲಕ ಅತ್ಯಂತ ನಿಕಟ ವಿಚಕ್ಷಣೆಗೆ ಒಳಪಡಿಸಲಾಗುವುದು ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.
ಅಮರನಾಥ ಯಾತ್ರೆಯ ಮಾರ್ಗದುದ್ದಕ್ಕೂ ಹೆಚ್ಚುವರಿಯಾಗಿ 22,500 ಅರೆಸೈನಿಕ ಪಡೆ ಸಿಬಂದಿಯನ್ನ ನೇಮಕ ಮಾಡಲಾಗಿದೆ ಎಂದು ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ