ರೈತರ ಸಾಲಮನ್ನಾವನ್ನು ಪರೋಕ್ಷವಾಗಿ ವಿರೋಧಿಸಿದರಾ ನಿಜಗುಣಾನಂದ ಸ್ವಾಮೀಜಿ…?

ಬಾಗಲಕೋಟೆ:ಜೂ-25: ರೈತರ ಸಾಲ ಮನ್ನಾ ವಿಚಾರವಾಗಿ ಮುಂಡರಗಿ ಮಠದ ನಿಜಗುಣಾನಂದ ಸ್ವಾಮೀಜಿ ವಿವಾದಾತ್ಮಕ ಭಾಷಣ ಮಾಡಿದ್ದಾರೆ.

ಬಾಗಲಕೋಟೆ ಜಿಲ್ಲೆ ಬಾದಾಮಿಯಲ್ಲಿ ಮಾತನಾಡಿದ ನಿಜಗುಣಾನಂದ ಸ್ವಾಮೀಜಿ,”ರೈತರು ಕುಮಾರಸ್ವಾಮಿ ಸಾಲಮನ್ನಾ ಮಾಡಲಿ ಎಂದು ದೇವರ ಮುಂದೆ ಹೇಳುತ್ತಾರೆ.
“ದೇವ್ರು ಕೇಳ್ತಾನೇನು ನಿನ್ನ‌ಮಾತು, ಮಗನೆ ನಿನಗ ಸಾಲ ಮಾಡು ಅಂದೋರು ಯಾರು? ಅಂತಾ ಕೇಳ್ತಾನೆ ದೇವರು.”ದೇವ್ರು ಬಹಳ ಡೇಂಜರ್ ಅದಾನ”ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಿನ್ನೆ ಸ್ಮಶಾನದಲ್ಲಿ ನಡೆದ ಮರಣದಲ್ಲಿ ಮಹಾನವಮಿ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಸಾಲ ಮನ್ನಾ ಬಗ್ಗೆ ವ್ಯಂಗ್ಯವಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾಲ್ಕು ಪ್ಯಾಂಟ್-ಶರ್ಟ್,1 ರೊಟ್ಟಿ,ಒಂದಿಷ್ಟು ಲೋಟಾ ಹಾಲು..ಮಲಗೋಕೆ ಅರ್ಧ ಮಂಚ ಈ ಕಡೆ ತಿರುಗಿದ್ರೆ ಆ ಕಡೆಯಿಲ್ಲ..ವಯ್ಯಸ್ಸು 60 ಆದ್ಮೇಲೆ ಶುಗರ್, ಬಿಪಿ ಶುರುವಾಗುತ್ತೆ. ನಿನಗ ಸಾಲ ಯಾಕ ಬಂತು..??”ಇಸ್ಪೇಟ್ ಆಡೋದ್ರಿಂದ ಸಾಲ ಬಂತು”….””ವ್ಯಸನದಿಂದ ಸಾಲ ಬಂತು””…ದೊಡ್ಡಸ್ಥನದಿಂದ ಸಾಲ ಬಂತು”..”ಈಗ ನೀನು ಉರುಳು ಹಾಕೊಂಡ್ರೆ ನಾನೇನು ಮಾಡ್ಲಿ” ಅಂತ ಅಂತಾನೆ ದೇವರು ಎಂದಿದ್ದಾರೆ.ದೇವರು ಎಲ್ಲಾ ಕಷ್ಷಕ್ಕೂ ಪರಿಹಾರ ಕೊಡುವುದಾಗಿದ್ರೆ ರೈತರ ಸಾಲಮನ್ನಾಕ್ಕೂ ಪರಿಹಾರ ಕೊಡ್ಲಿ ನೋಡೋಣ ಎಂದ ಸ್ವಾಮೀಜಿ ಹಿತಮಿತ ಜೀವನವಿರಲಿ ಎಂದು ಪರೋಕ್ಷವಾಗಿ ಸಾಲಮನ್ನಾ ವಿರೋಧಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ