ವಿವಿಐಪಿ ಹೆಲಿಕಾಪ್ಟರ್ ಖರೀದಿ ಹಗರಣ: ಮಧ್ಯವರ್ತಿ ಕಾರ್ಲೊ ಗೆರೊಸಾನನ್ನು ಭಾರತಕ್ಕೆ ಬಿಟ್ಟುಕೊಡಲು ನಿರಾಕರಿಸಿದ ಇಟಲಿ

ನವದೆಹಲಿ:ಜೂ-23: ಬಹುಕೋಟಿ ವಿವಿಐಪಿ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಪ್ರಕರಣದ ಮಧ್ಯವರ್ತಿಯಾಗಿದ್ದ ಕಾರ್ಲೊ ಗೆರೊಸಾ ಅವರನ್ನು ಭಾರತಕ್ಕೆ ಬಿಟ್ಟುಕೊಡಲು ಇಟಲಿ ನಿರಾಕರಿಸಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ವಿವಿಐಪಿ ಹೆಲಿಕಾಪ್ಟರ್ ಖರೀದಿ ವ್ಯವಹಾರದಲ್ಲಿ 3,227 ಕೋಟಿ ಅವ್ಯವಹಾರ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಸಿಬಿಐ ಒತ್ತಾಯದ ಮೇರೆಗೆ ಇಂಟರ್‍‍ಪೋಲ್ ರೆಡ್ ಕಾರ್ನರ್ ನೋಟಿಸ್ ನೀಡಿದ ನಂತರ ಇಟಲಿ ಸರ್ಕಾರ ಕಳೆದ ಅಕ್ಬೋಬರ್‍‍ನಲ್ಲಿ ಗೊರೊಸಾ ಅವರನ್ನು ಬಂಧಿಸಿತ್ತು.

ತನಿಖೆಯ ಭಾಗವಾಗಿ ಗೊರೊಸಾ ಅವರನ್ನು ತಮಗೆ ಬಿಟ್ಟುಕೊಡಬೇಕೆಂದು ಸಿಬಿಐ ನವೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಹೆಲಿಕಾಪ್ಟರ್ ವ್ಯವಹಾರದಲ್ಲಿ ಗೊರಾಸಾ ಅವರ ಕೈವಾಡ ಬಗ್ಗೆ ಇರುವ ಆರೋಪಪಟ್ಟಿಯನ್ನು ಇಟಲಿಗೆ ನೀಡಲಾಗಿತ್ತು. ಆದರೆ, ಸ್ವಿಜ್ ಪಾಸ್‌‍ಪೋರ್ಟ್ ಹೊಂದಿರುವ ಗೊರೊಸಾ ಅವರನ್ನು ಬಿಟ್ಟುಕೊಡಲು ಆಗುವುದಿಲ್ಲ ಎಂದು ಇಟಲಿ ಹೇಳಿದೆ.

ಅಗಸ್ಟಾ ವೆಸ್ಟ್‌ಲ್ಯಾಂಡ್‌ನಿಂದ ಗಣ್ಯರ ಸಂಚಾರಕ್ಕೆಂದು 3,727 ಕೋಟಿ ರೂ ವೆಚ್ಚದಲ್ಲಿ 12 ‘ಎಡಬ್ಲ್ಯೂ-101’ ಕಾಪ್ಟರ್‌ಗಳನ್ನು ಖರೀದಿಸುವ ಒಪ್ಪಂದ ಕುದುರಿಸುವಲ್ಲಿ ಅಧಿಕಾರಿಗಳಿಗೆ 452 ಕೋಟಿ ರೂ ಲಂಚ ಪಾವತಿಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. 12 ವಿವಿಐಪಿ ಹೆಲಿಕ್ಯಾಪ್ಟರ್‌ ಖರೀದಿಸುವಲ್ಲಿ 3,600 ಕೋಟಿ ಮೌಲ್ಯದ ಡೀಲ್‍ನ್ನು ಅಂದಿನ ವಾಯುಸೇನೆಯ ಮುಖ್ಯಸ್ಥ ತ್ಯಾಗಿ ಇಟಲಿ ಮೂಲದ ಅಗಸ್ಟಾ ವೆಸ್ಟಲ್ಯಾಂಡ್‌ ಕಂಪನಿಯಿಂದ ಲಂಚ ಪಡೆದು ಕುದುರಿಸಿದ್ದರು ಎಂದು ಕಂಪನಿ ಆರೋಪಿಸಿತ್ತು. ಈ ವ್ಯವಹಾರದಲ್ಲಿ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದು ಗೆರೊಸಾ ಎಂದು ಸಿಬಿಐ ತನಿಖೆಯಿಂದ ಪತ್ತೆಯಾಗಿತ್ತು. ಗೆರೊಸಾ ಅವರನ್ನು ಬಿಟ್ಟುಕೊಡಲು ಇನ್ನೊಂದು ಬಾರಿ ಮನವಿ ಮಾಡುವುದಾಗಿ ಸಿಬಿಐ ಹೇಳಿದೆ.

VVIP Chopper Scam,AgustaWestland,Italy refuses to extradite AgustaWestland middleman Carlo Gerosa

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ