ಮತ್ತೊಂದು ಶಾಕ್‌ ನೀಡಲು ಟ್ರಂಪ್‌ ಸರ್ಕಾರ ಸಜ್ಜು: ಭಾರತೀಯರಿಗೆ ಬೀಳುತ್ತಾ ಹೆಚ್ಚಿನ ಪೆಟ್ಟು?!

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ಮತ್ತೊಂದು ಬಿಗಿ ಕ್ರಮಕ್ಕೆ ಮುಂದಾಗಿದೆ. ಇಬಿ-5 ವೀಸಾ ನೀತಿ ನಿಮಯಗಳನ್ನು ಪೂರ್ಣ ಸುಧಾರಣೆ ಇಲ್ಲದೇ, ಅದನ್ನು ತೆಗೆದು ಹಾಕಲು ಟ್ರಂಪ್‌ ಸರ್ಕಾರ ಆದೇಶಿಸಿದೆ.
ಇಬಿ-5 ವೀಸಾ ಎಂದರೆ ಬಂಡವಾಳ ಹೂಡುವ ಮೂಲಕ ಪಡೆಯುವ ವೀಸಾ ಆಗಿದೆ. ಈ ಮೂಲಕ ಅಮೆರಿಕದಲ್ಲಿ ನೆಲೆಸುವ ವಿದೇಶಿಗರು ಸುಮಾರು 1 ಮಿಲಿಯನ್‌ ಡಾಲರ್ ಗಳವರೆಗೂ ಬಂಡವಾಳ ಹೂಡಿ, ಕನಿಷ್ಠ 10 ಪೂರ್ಣಾವಧಿ ಹುದ್ದೆಗಳನ್ನು ಸೃಷ್ಟಿವವರಿಗೆ ಕೆಲವೇ ತಿಂಗಳಲ್ಲಿ ಅಲ್ಲಿನ ಕಾಯಂ ಸದಸ್ಯತ್ವದ ಗ್ರೀನ್‌ ಕಾರ್ಡ್‌‌ ನೀಡುವ ವ್ಯವಸ್ಥೆಯೇ ಈ ಇಬಿ-5 ವೀಸಾ.
ಈಗ ಸುಧಾರಣೆ ಯಾಕೆ?
ಇಬಿ-5 ವೀಸಾ ಹೊಂದಿರುವ ವಿದೇಶಿಗರು ಈ ವೀಸಾವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಹಾಗೂ ಇದರಿಂದ ವಂಚಿಸುತ್ತಿದ್ದಾರೆ ಎಂಬ ವರದಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕಲು ಟ್ರಂಪ್‌ ಸರ್ಕಾರ ಇಬಿ-5 ವೀಸಾ ನೀತಿ ನಿಮಯಗಳನ್ನು ಪೂರ್ಣ ಸುಧಾರಣೆಗೆ ಮುಂದಾಗಿದೆ.
ಹೆಚ್ಚು ಭಾರತೀಯರು…
ಈ ಇಬಿ-5 ವೀಸಾವನ್ನು ಹೊಂದಿರುವ ಅಮೆರಿಕದಲ್ಲಿನ ವಿದೇಶಿಗರ ಪೈಕಿ ಭಾರತೀಯರೇ ಹೆಚ್ಚು ಜನರಿದ್ದಾರೆ. ಮೊದಲ ಸ್ಥಾನದಲ್ಲಿ ಚೀನಾ, ತದನಂತರದಲ್ಲಿ ವಿಯೆಟ್ನಾಂ ಇದ್ದು, ಮೂರನೇ ಸ್ಥಾನದಲ್ಲಿ ಭಾರತ ಇದೆ. ಚೀನಾ ಪ್ರಜೆಗಳಿಂದ ಇಬಿ-5 ವೀಸಾ ಹೆಚ್ಚಾಗಿ ದುರ್ಬಳಕೆ ಆಗುತ್ತಿದೆ ಎಂದು ಹೇಳಲಾಗುತ್ತಿದೆ.
ಈ ಕಾರಣದಿಂದಲೇ ಟ್ರಂಪ್‌ ಸರ್ಕಾರ ಈಗ ಇಬಿ-5 ವೀಸಾ ಮೇಲೆ ಕಣ್ಣು ಹಾಕಿದೆ. ಇಬಿ-5 ವೀಸಾ ವಿತರಣೆ ಮೇಲೆ ಕಡಿವಾಣ ಹಾಕುವ ಮೂಲಕ ದೇಶದ ಭದ್ರತೆಯನ್ನ ಮತ್ತಷ್ಟು ಬಿಗಿ ಗೊಳಿಸುವುದು ಅಮೆರಿಕ ಸರ್ಕಾರದ ಉದ್ದೇಶ. ಈಗಾಗಲೇ ಎಚ್‌-1 ಬಿ ವೀಸಾ ನೀಡಿಕೆ ಮೇಲಿನ ಕಟ್ಟಳೆಗಳನ್ನು ಬಿಗಿಗೊಳಿಸಿರುವುದರಿಂದ ಭಾರತೀಯ ಟೆಕ್ಕಿಗಳು ಸಂಕಷ್ಟಕೊಳ್ಳಗಾಗಿದ್ದಾರೆ. ಇದೀಗ ಭಾರತೀಯ ಉದ್ಯಮಿಗಳಿಗೂ ಟ್ರಂಪ್‌ ಹೊಸ ನಿರ್ಬಂಧ ಸಂಕಷ್ಟ ತಂದೊಡ್ಡುವ ಸಾಧ್ಯತೆಗಳಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ