19 ವರ್ಷದ ಅನುಕ್ರೀತಿ ವಾಸ್‍ಗೆ 2018ರ ಫೆಮಿನಾ ಮಿಸ್ ಇಂಡಿಯಾ ಕಿರೀಟ

ಮುಂಬೈ: ನಗರದಲ್ಲಿ ಆಯೋಜಿಸಲಾಗಿದ್ದ 55 ನೇ ಆವೃತ್ತಿಯ ಎಪ್ ಬಿಬಿ ಫೆಮಿನಾ ಮಿಸ್ ಇಂಡಿಯಾ 2018ರ ಕಿರೀಟವನ್ನು ಅನುಕ್ರೀತಿ ವಾಸ್ ಧರಿಸಿದ್ದಾರೆ.

ಮೂಲತಃ ತಮಿಳುನಾಡಿನವರಾಗಿರೋ ಇವರಿಗೆ 19 ವರ್ಷ ವಯಸ್ಸು. ತಮಿಳುನಾಡಿನ ಕಾಲೇಜೊಂದರ ವಿದ್ಯಾರ್ಥಿನಿಯಾಗಿದ್ದಾರೆ. ಮುಂಬೈನಲ್ಲಿ ನಡೆದ ಎಫ್ ಬಿಬಿ ಫೆಮಿನಾ ಮಿಸ್ ಇಂಡಿಯಾದ 55 ಆವೃತ್ತಿಯ ಸ್ಫರ್ಧೆಗೆ ಭಾರತದ 30 ರಾಜ್ಯಗಳಲ್ಲಿ ಅರ್ಹತಾ ಪರೀಕ್ಷೆ ಏರ್ಪಡಿಸಲಾಗಿತ್ತು. ಅದರಲ್ಲಿ ಆಯ್ಕೆಗೊಂಡ ಹಲವರಲ್ಲಿ ಮೂವರನ್ನು ಫೈನಲ್ ಗೆ ಆಯ್ಕೆ ಮಾಡಲಾಗಿತ್ತು. ಈ ಸ್ಪರ್ಧೆಯಲ್ಲಿ ಅನಿಕ್ರೀತಿ ವಾಸ್ ಎಫ್ ಬಿಬಿ ಫೆಮಿನಾ ಮಿಸ್ ಇಂಡಿಯಾ 2018ರ ಕಿರೀಟವನ್ನು ಧರಿಸಿ ಸಂಭ್ರಮಿಸಿದರು.

ದ್ವಿತೀಯ ಸ್ಥಾನವನ್ನು ಹರಿಯಾಣಾದ ಮೀನಾಕ್ಷಿ ಚೌಧರಿ ಪಡೆದರೆ, ತೃತೀಯ ಸ್ಥಾನವನ್ನು ಆಂಧ್ರಪ್ರದೇಶದ ಶ್ರೇಯಾ ರಾವ್ ಪಡೆದು ಸಂಭ್ರಮಿಸಿದರು. ಈ ಸ್ಪರ್ಧೆಯನ್ನು ನಿರ್ಮಾಪಕ ಕರಣ್ ಜೋಹರ್ ಹಾಗೂ ನಟ ಆಯುಷ್ಮಾನ್ ಖುರ್ರಾನಾ ನಡೆಸಿಕೊಟ್ಟರು. ವಿಜೇತರಾದ ಅನುಕ್ರೀತಿ ವಾಸ್ ಮುಂದೆ ನಡೆಯಲಿರುವ ವಿಶ್ವ ಮಟ್ಟದ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜೇತರಾದ ಅನುಕ್ರೀತಿ ವಾಸ್ ರವರಿಗೆ 2018 ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು 2017ರ ವಿಶ್ವ ಸುಂದರಿ ವಿಜೇತೆ ಮಾನುಷಿ ಚಿಲ್ಲರ್ ಕಿರೀಟ ತೊಡಿಸಿದರು. ಈ ಸ್ಪರ್ಧೆಯಲ್ಲಿ ದ್ವಿತಿಯ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿಗಳು 2018ರ ಮಿಸ್ ಗ್ರ್ಯಾಂಡ್ ಇಂಟರ್ ನ್ಯಾಶನಲ್ 2018 ಹಾಗೂ ಮಿಸ್ ಯುನೈಟೆಡ್ ಕಾಂಟಿನೆಂಟ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ. ಈ ಸ್ಪರ್ಧೆಯಲ್ಲಿ ಟಾಪ್ 5 ಸ್ಥಾನಗಳನ್ನು ಪಡೆದ ಸ್ಪರ್ಧಿಗಳ ಪಟ್ಟಿ ಈ ರೀತಿಯಾಗಿದೆ.

ಟಾಪ್ 5 ಸ್ಪರ್ಧಿಗಳು:
ಗಾಯತ್ರಿ ಭಾರದ್ವಾಜ್-ಮಿಸ್ ಇಂಡಿಯಾ ದೆಹಲಿ
ಮೀನಾಕ್ಷಿ ಚೌಧರಿ- ಮಿಸ್ ಇಂಡಿಯಾ ಹರ್ಯಾಣಾ
ಸ್ಟೆಫಿ ಪಟೇಲ್-ಮಿಸ್ ಇಂಡಿಯಾ ಜಾರ್ಖಂಡ್
ಅನುಕೀರ್ತಿ ವಾಸ್- ಮಿಸ್ ಇಂಡಿಯಾ ತಮಿಳುನಾಡು
ಶ್ರೇಯಾಶ ರಾವ್- ಮಿಸ್ ಇಂಡಿಯಾ ಆಂಧ್ರಪ್ರದೇಶ್

ಬಾಲಿವುಡ್ ಸುಂದರಿಯರಾದ ಕರೀನಾ ಕಪೂರ್, ಮಾಧುರಿ ದೀಕ್ಷಿತ್, ಜಾಕ್ವೇಲಿನ್ ಫರ್ನಾಂಡೀಸ್, ಅವರು ಗಾಲಾದಲ್ಲಿ ಪ್ರದರ್ಶನ ನೀಡಿದ್ದಾರೆ. ಕರಣ್ ಜೋಹರ್, ಆಯುಷ್ಮಾನ್ ಖುರ್ರಾನ್, ರಾಕುಲ್ ಪ್ರೆಟ್ ಮೊದಲಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ