ಬಿನ್ನಿಪೇಟೆ ಉಪಚುನಾವಣಾ ಫಲಿತಾಂಶ ಪ್ರಕಟ: ಗೆಲುವಿನ ನಗು ಬೀರಿದ ಜೆಡಿಎಸ್​ ಅಭ್ಯರ್ಥಿ ಐಶ್ವರ್ಯಾ

ಬೆಂಗಳೂರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, 7188 ಮತಗಳನ್ನು ಪಡೆಯುವ ಮೂಲಕ ಜೆಡಿಎಸ್​ ಅಭ್ಯರ್ಥಿ ಐಶ್ವರ್ಯಾ ಮಹಾದೇವಮ್ಮ ಜಯ ಸಾಧಿಸಿದ್ದಾರೆ.
ಹೋಮ್​ ಸೈನ್ಸ್​ ಕಾಲೇಜಿನಲ್ಲಿ ನಡೆದ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿದ್ದ ಐಶ್ವರ್ಯಾ 1939 ಮತಗಳ ಅಂತರದಿಂದ ಗೆಲುವು ಕಂಡಿದ್ದಾರೆ.
ಕಾಂಗ್ರೆಸ್ ನ ದಿನೇಶ್​ ಗುಂಡೂರಾವ್​ ಅವರ ಆಪ್ತೆ ವಿದ್ಯಾ ಶಶಿಕುಮಾರ್​ 5249 ಮತಗಳನ್ನು ಪಡೆಯುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.  ದಿನೇಶ್​ ಗುಂಡೂರಾವ್  ಅವರ ಪ್ರತಿಷ್ಟೆಯ ಕಣವಾಗಿದ್ದ ಬಿನ್ನಿಪೇಟೆ ವಾರ್ಡ್​ನಲ್ಲಿ ಸೋಲಿನ ರುಚಿ ಕಂಡಂತಾಗಿದೆ. ಬಿಜೆಪಿಯ ಜಿ. ಚಾಮುಂಡೇಶ್ವರಿ ಅವರಿಗೆ 2455 ಮತಗಳು ಲಭಿಸಿದ್ದು, 159 ಮಂದಿ ನೋಟಾಕ್ಕೆ ಬೆರಳನ್ನೊತ್ತಿದ್ದಾರೆ.
ಗಾಂಧಿನಗರ ವಿಧಾನಸಭಾ ವ್ಯಾಪ್ತಿಗೆ ಬರುವ ಈ ವಾರ್ಡ್‍ನ ಕಾರ್ಪೋರೇಟರ್ ಮಹಾದೇವಮ್ಮ ಹೃದಯಾಘಾತದಿಂದ ನಿಧನರಾಗಿದ್ದ ಹಿನ್ನೆಲೆಯಲ್ಲಿ ಮಹಾದೇವಮ್ಮ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತ. 34,582 ಮತದಾರರಿರುವ ಈ ವಾರ್ಡ್​ನಲ್ಲಿ ಶೇ. 43.55ರಷ್ಟು ಮತದಾನವಾಗಿತ್ತು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ